Thursday, June 4, 2026
Homeಕರಾವಳಿಸುಳ್ಯ: ಉಪ್ಪುಕಳದಲ್ಲಿ‌ ಸೇತುವೆ ಕೊಚ್ಚಿ ಹೋದ ಪ್ರಕರಣ: ಶೀಘ್ರವೇ ಕಾಲು ಸೇತುವೆ ನಿರ್ಮಿಸಿ ಕೊಡುವ ಭರವಸೆ...

ಸುಳ್ಯ: ಉಪ್ಪುಕಳದಲ್ಲಿ‌ ಸೇತುವೆ ಕೊಚ್ಚಿ ಹೋದ ಪ್ರಕರಣ: ಶೀಘ್ರವೇ ಕಾಲು ಸೇತುವೆ ನಿರ್ಮಿಸಿ ಕೊಡುವ ಭರವಸೆ ನೀಡಿದ ತಹಶೀಲ್ದಾರ್

- Advertisement -
- Advertisement -

ಸುಳ್ಯ:  ಬಾಳುಗೋಡು ಗ್ರಾಮದ ಉಪ್ಪುಕಳ ನಿವಾಸಿಗಳ ಸಂಪರ್ಕ ಕೊಂಡಿಯಾಗಿದ್ದ  ಎರಡು ಕಾಲು ಸೇತುವೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು ಸದ್ಯ ದ್ವೀಪದಂತಾಗಿದೆ.
ಈ ಬಗ್ಗೆ‌ ಪತ್ರಿಕೆಗಳಲ್ಲಿ‌ ಬಿತ್ತರವಾಗುತ್ತಿದ್ದಂತೆ‌ ಎಚ್ಚೆತ್ತುಕೊಂಡ ಸುಳ್ಯ ತಹಶೀಲ್ದಾರ್ ಕು.ಅನಿತಾಲಕ್ಷ್ಮೀ ಘಟನಾ ಸ್ಥಳಕ್ಕೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿದ್ದಾರೆ

ಬಳಿಕ ಮಾತನಾಡಿದ ಅವರು ಸದ್ಯಕ್ಕೆ‌ ತುರ್ತಾಗಿ ತಾತ್ಕಾಲಿಕ ಕಾಲು ಸೇತುವೆ ನಿರ್ಮಿಸಲು ಸ್ಥಳೀಯ ಪಂಚಾಯತ್ ಗೆ ತಿಳಿಸಿದ್ದೇವೆ. ಮಳೆಗಾಲ ಕಡಿಮೆಯಾದ ಬಳಿಕ ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ಮೂಲಕ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಸೇತುವೆ ಅಥವಾ ತೂಗುಸೇತುವೆ ನಿರ್ಮಿಸಲು ಮನವಿ ಸಲ್ಲಿಸಲಾಗುವುದು. ಹೊಳೆಯ ಒಳಹರಿವು ಕಡಿಮೆಯಾಗುವವರೆಗೆ ತಾತ್ಕಾಲಿಕವಾಗಿ ಇರುವ ಸೇತುವೆ ಬಳಸಿಕೊಳ್ಳಲು ನಿವಾಸಿಗಳಿಗೆ ತಿಳಿಸಿದ್ದೇವೆ ಎಂದಿದ್ದಾರೆ.

- Advertisement -

Latest News

error: Content is protected !!