Thursday, June 25, 2026
Homeಕರಾವಳಿಬಾಲಕ ಅನುಮಾನಸ್ಪದ ಸಾವು ಪ್ರಕರಣ; ಘಟನಾ ಸ್ಥಳಕ್ಕೆ ಐಜಿಪಿ, ಎಸ್ಪಿ ಭೇಟಿ ನೀಡಿ ಪರಿಶೀಲನೆ

ಬಾಲಕ ಅನುಮಾನಸ್ಪದ ಸಾವು ಪ್ರಕರಣ; ಘಟನಾ ಸ್ಥಳಕ್ಕೆ ಐಜಿಪಿ, ಎಸ್ಪಿ ಭೇಟಿ ನೀಡಿ ಪರಿಶೀಲನೆ

- Advertisement -
- Advertisement -

ಬೆಳ್ತಂಗಡಿ : ನಾಳ ದೇವಸ್ಥಾನಕ್ಕೆಂದು ಧನು ಪೂಜೆಗೆಂದು ಹೊರಟ 9 ನೇ ತರಗತಿ ಬಾಲಕ ಸುಮಂತ್(15) ಮೃತದೇಹ ಕೆರೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾದ ಪ್ರಕರಣ ಸಂಬಂಧ ಜ.14 ರಂದು ಮಂಗಳೂರು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಮತ್ತು ಜಿಲ್ಲಾ ಎಸ್ಪಿ ಡಾ.ಅರುಣ್.ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಲಕನ ತಲೆಯಲ್ಲಿ ಎರಡು ಕಡೆ ಗಾಯವಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ.

ವಾರಕೊಮ್ಮೆ ದೇವಾಸ್ಥಾನಕ್ಕೆ ಹೋಗುತ್ತಿದ್ದ ಸುಮಂತ್ ಇಂದು ಬೆಳಗ್ಗೆ 5 ಗಂಟೆಗೆ ಮನೆಯಿಂದ ಹೋಗಿದ್ದಾರೆ. ಮನೆಯ 500 ಮೀಟರ್ ಅಂತರದಲ್ಲಿ ಆತನ ಮೃತದೇಹ ಬಾವಿಯಲ್ಲಿ ದೊರೆತಿದೆ. ಅಲ್ಲಿ ರಕ್ತದ ಕಳೆಗಳು ಸಿಕ್ಕಿದ್ದು ಮರಣೋತ್ತಾರ ಪರೀಕ್ಷೆ ನಡೆಸಿ, ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಡಾ.ಅರುಣ್ ಕೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ್ ನೇತೃತ್ವದಲ್ಲಿ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಅನಂದ್.ಎಂ ತಂಡದ ಸಿಬ್ಬಂದಿ ತನಿಖೆ ಚುರುಕುಗೊಳಿಸಿದ್ದಾರೆ.

- Advertisement -

Latest News

error: Content is protected !!