ಮಂಗಳೂರು: ಜನವರಿ 16, 17 ಮತ್ತು 18, 2026 ರಂದು 3 ದಿನಗಳ ಐಸ್ ಕ್ರೀಮ್ ಪರ್ಬವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಪಾಂಡೇಶ್ವರದಲ್ಲಿರುವ ಫಿಝಾ ಬೈ ನೆಕ್ಸಸ್ ಮಾಲ್ ಮತ್ತು ಮಂಗಳೂರಿನ ಪ್ರಸಿದ್ಧ ತಿಂಡಿ Instagram ಪೇಜ್ ಸಹ ಭಾಗಿತ್ವದಲ್ಲಿ ನಡೆಸಲಾಗುತ್ತಿದೆ
ಮೂರೂ ದಿನ ಕೂಡ ಬೆಳಗ್ಗೆ 11 ರಿಂದ ರಾತ್ರಿ 9 ರವರೆಗೆ ನಡೆಯಲಿದ್ದು, 17 ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ.
ಭಾಗವಿಸುವ ಐಸ್ ಕ್ರೀಮ್ ಸಂಸ್ಥೆಗಳು , ಐಡಿಯಲ್-ಪಬ್ಬಾಸ್, ಹ್ಯಾಂಗ್ಯೋ, ಕೈಲಾರ್ಸ್, ಫ್ಲೇವರ್ಸ್, F5, ಮಾವಿನ ಹಣ್ಣುಗಳು, LATO, ಮಿಲ್ಕಿ ಮಿಸ್ಟ್, ಕ್ಯಾಮರಿ, ಅಪ್ಸರಾ, ಬೋನ್‌ಬನ್ಸ್, ಕಿವಿ, ಸೆರೆನೊ ಗೆಲಾಟೊ, ಸ್ವಿರ್ಲಿಯೊ, ಫ್ರೂಟ್ ಪಾಪ್ಜ್, ಕಿಂಗ್ ಐಸ್‌ಕ್ರೀಮ್ ಗಳು ಭಾಗವಹಿಸಲಾಗಿರುತ್ತದೆ.2024 ಮತ್ತು 2025 ರಲ್ಲಿ ನಡೆದ ಐಸ್ ಕ್ರೀಮ್ ಪರ್ಬದ ಮೊದಲ ಮತ್ತು ಎರಡನೆಯ ಅವೃತ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ಉತ್ತಮ ಸ್ಪಂದನೆ ಸಿಕ್ಕಿತ್ತು. ಈ ಬಾರಿಯೂ ಅತೀ ಹೆಚ್ಚಿನ ಜನ ಸೇರುವ ನಿರೀಕ್ಷೆ ಇದ್ದು, ಸಾಮಾಜಿಕ ಜಾಲತಾಣ ದಲ್ಲಿ ಪ್ರಸಾರ ಮಾಡಿದ ವಿಡಿಯೋಗಳಿಗೆ ಈಗಗಾಲೇ ಹೆಚ್ಚಿನ ಜನ ಉತ್ತಮ ಪ್ರತಿಕ್ರಿಯೆ ನೀಡಿದ್ದು, ಹೆಚ್ಚಿನ ಬಸ್ ಕ್ರೀಮ್ ಪ್ರಿಯರು ಭಾಗಿಯಾಗುವ ಎಲ್ಲ ಲಕ್ಷಣ ಕಂಡು ಬಂದಿದೆ.


