- Advertisement -
![]()
- Advertisement -
ಸುಳ್ಯ; ಅಡಿಕೆ ಕಳ್ಳತನದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯ ತಾಲೂಕಿನ ಮಂಡೆಕೋಲು ನಿವಾಸಿ ಸುಪ್ರಿತ್ ಕೆ(22), ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಮಹಮ್ಮದ್ ಸಿನಾನ್(21) ಬಂಧಿತರು.
ಆರೋಪಿಗಳು ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜಾವರ ಪೇಟೆಯಲ್ಲಿರುವ ದಿನಸಿ ಅಂಗಡಿ ಮಾಲೀಕರಾದ ಮಹಮ್ಮದ್ ರಫೀಕ್ ಎಸ್ ಡಿ ರವರ ಅಡಿಕೆ ಸಂಗ್ರಹಿಸುವ ಗೋಡಾನ್‌ನಿಂದ ದಿನಾಂಕ:12.09.2025ರಂದು ರಾತ್ರಿ ಅಡಿಕೆಯನ್ನು ಕದ್ದಿದ್ದರು. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಇಬ್ಬರನ್ನು ದಿನಾಂಕ:19.09.2025ರಂದು ಸುಳ್ಯ ತಾಲೂಕು ಮಂಡೆಕೋಲು ಗ್ರಾಮ ಮುರೂರು ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದೆ.

ಆರೋಪಿಗಳು ಕಳವು ಮಾಡಿದ 1 ಕಿಂಟ್ವಾಲ್ ಸುಲಿದ ಅಡಿಕೆ, ಹಾಗೇ ಸಾಗಾಟ ಮಾಡಲು ಆಟೋ ರಿಕ್ಷಾವನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
- Advertisement -


