Saturday, August 29, 2026
Homeತಾಜಾ ಸುದ್ದಿಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ  

ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ  

- Advertisement -
- Advertisement -

ಬೆಂಗಳೂರು : ಹೆಸರು ಬದಲಾಯಿಸಿಕೊಂಡು ಸಿಲಿಕಾನ್‌ ಸಿಟಿಯ ಓಡಾಡುತ್ತಿದ್ದ ಶಂಕಿತ ಉಗ್ರನೊಬ್ಬನನ್ನು ಜಮ್ಮು ಕಾಶ್ಮೀರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ತಾಲಿಬ್ ಹುಸೇನ್ (38) ಬಂಧಿತ ಶಂಕಿತ ಉಗ್ರ.

ತಾಲಿಬ್  ಬಿಎನ್‌ಎಲ್‌ ಏರ್‌ ಸರ್ವಿಸ್‌ನಲ್ಲಿ ಕೆಲಸ ಮಾಡುತ್ತಿದ್ದ. ಕಾಶ್ಮೀರದಿಂದ ಪೊಲೀಸೊಬ್ಬರ ಪತ್ನಿಯನ್ನೇ ಪ್ರೀತಿಸಿ ಈತ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದನು. ಪತ್ನಿ ಮತ್ತು ಮಕ್ಕಳ ಜತೆಗೆ ವಾಸವಿದ್ದ ತಾಲಿಬ್ ನ  ಕುಟುಂಬ ಕಷ್ಟವನ್ನು ನೋಡಿ ಓಕುಳಿಪುರಂ ಮಸೀದಿ ಮುಖ್ಯಸ್ಥ ಅನ್ವರ್‌ ಪಾಷಾ ಆಶ್ರಯ ನೀಡಿದ್ದರು. ಮಸೀದಿಯಲ್ಲಿ ಉಗ್ರ ತಾಲಿಬ್‌ ಪಾಠ ಪ್ರವಚನ ಮಾಡುತ್ತಿದ್ದ ಎನ್ನಲಾಗಿದೆ. ಇದೀಗ ಭಾರಿ ಬಂದೋಬಸ್ತ್ ನಲ್ಲಿ ತಾಲಿಬ್ ಹುಸೇನ್ ನನ್ನ ವಶಕ್ಕೆ ಪಡೆದು ಪೊಲೀಸರು ಜಮ್ಮು ಕಾಶ್ಮೀರಕ್ಕೆ ಕರೆದೊಯ್ದಿದ್ದಾರೆ.

- Advertisement -

Latest News

error: Content is protected !!