Monday, May 20, 2024
Homeತಾಜಾ ಸುದ್ದಿರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಎಜಿ ಪೆರಾರಿವಾಲನ್ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಎಜಿ ಪೆರಾರಿವಾಲನ್ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

spot_img
- Advertisement -
- Advertisement -

ಚೆನ್ನೈ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ಎಜಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ‘ಅನುಚ್ಛೇದ 142 ಅನ್ನು ಚಲಾಯಿಸುವ ಮೂಲಕ ಅಪರಾಧಿಯನ್ನು ಬಿಡುಗಡೆ ಮಾಡುವುದು ಸೂಕ್ತವಾಗಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ನಾಗೇಶ್ವರ ರಾವ್, ಬಿ.ಆರ್.ಬವಾಯಿ ಮತ್ತು ಎ.ಎಸ್.ಬೋಪಣ್ಣ ಸೇರಿದಂತೆ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠವು ಬುಧವಾರ ಈ ತೀರ್ಪನ್ನು ಪ್ರಕಟಿಸಿದೆ.ಮಾರ್ಚ್ 9, 2022 ರಂದು ಆದೇಶದ ಮೂಲಕ, ಸುಪ್ರೀಂ ಕೋರ್ಟ್ ಎಜಿ ಪೆರಾರಿವಾಲನ್ ಅವರಿಗೆ ಜಾಮೀನು ನೀಡಿತು.

ಏಪ್ರಿಲ್ 27, 2022 ರಂದು, ಎಜಿ ಪೆರಾರಿವಾಲನ್ ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷೆ ಅನುಭವಿಸಿದ್ದರಿಂದ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಸೂಚಿಸಿತು.

2018 ರಲ್ಲಿ ತಮಿಳುನಾಡು ಸರ್ಕಾರದ ಶಿಫಾರಸಿನ ಆಧಾರದ ಮೇಲೆ ಜೈಲಿನಿಂದ ಬಿಡುಗಡೆ ಕೋರಿ ಪೆರಾರಿವಾಲನ್ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಮೇ 11, 2022 ರಂದು ಕಾಯ್ದಿರಿಸಿದೆ. ಕಳೆದ ವಾರ ನಡೆದ ವಿಚಾರಣೆಯಲ್ಲಿ, ಕ್ಷಮಾದಾನ ನೀಡುವ ಪ್ರಕರಣಗಳಲ್ಲಿ ರಾಷ್ಟ್ರಪತಿಗಳಿಗೆ ಮಾತ್ರ ವಿಶೇಷ ಅಧಿಕಾರವಿರುತ್ತದೆ ಎಂಬ ತನ್ನ ವಾದಕ್ಕೆ ಸಂಬಂಧಿಸಿದಂತೆ ಕೇಂದ್ರವು ನ್ಯಾಯಾಲಯದಿಂದ ಟೀಕೆಗೆ ಗುರಿಯಾಗಿತ್ತು.

ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆರಾರಿವಾಲನ್ 30 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು.

- Advertisement -
spot_img

Latest News

error: Content is protected !!