Friday, June 27, 2025
Homeತಾಜಾ ಸುದ್ದಿಸುಪ್ರೀಂಕೋರ್ಟ್ ನಿಂದ ವಕ್ಫ್‌ ಕಾಯ್ದೆ ವಿಚಾರದಲ್ಲಿ ಮಧ್ಯಂತರ ಆದೇಶ; ಒಂದು ವಾರಗಳ ಕಾಲ ಕೇಂದ್ರಕ್ಕೆ ಗಡುವು

ಸುಪ್ರೀಂಕೋರ್ಟ್ ನಿಂದ ವಕ್ಫ್‌ ಕಾಯ್ದೆ ವಿಚಾರದಲ್ಲಿ ಮಧ್ಯಂತರ ಆದೇಶ; ಒಂದು ವಾರಗಳ ಕಾಲ ಕೇಂದ್ರಕ್ಕೆ ಗಡುವು

spot_img
- Advertisement -
- Advertisement -

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ವಕ್ಫ್‌ ತಿದ್ದುಪಡಿ ಕಾಯ್ದೆಯು ಸುಪ್ರೀಂಕೋರ್ಟ್ ಹಂತದಲ್ಲಿದ್ದು, ಇದೀಗ ಈ ಕಾಯ್ದೆಯ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ಇಂದು ನಡೆಯಿತು. 

ಸುಪ್ರೀಂಕೋರ್ಟ್‌ ಈ ಪ್ರಕರಣದ ಕುರಿತಂತೆ ವಿಚಾರಣೆ ನಡೆಸಿದ್ದು, 2025ರ ವಕ್ಫ್‌ ಕಾಯ್ದೆಗೆ ಸಂಬಂಧಿಸಿದ ವಿಷಯದಲ್ಲಿ ಕೇಂದ್ರವು ಏಳು ದಿನಗಳಲ್ಲಿ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುತ್ತದೆ ಎಂಬ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರ ಹೇಳಿಕೆಯನ್ನು ಸುಪ್ರೀಂಕೋರ್ಟ್‌ ದಾಖಲಿಸಿಕೊಂಡಿತ್ತು. ಅಷ್ಟೇಅಲ್ಲದೆ ವಕ್ಫ್‌ ಕಾಯ್ದೆಯ ಸೆಕ್ಷನ್ 9 ಮತ್ತು 14ರ ಅಡಿಯಲ್ಲಿ ಕೇಂದ್ರ ವಕ್ಫ್‌ ಕೌನ್ಸಿಲ್‌ ಮತ್ತು ರಾಜ್ಯ ವಕ್ಫ್‌ ಮಂಡಳಿಗಳಿಗೆ ಯಾವುದೇ ನೇಮಕಾತಿಯನ್ನು ಮಾಡಲಾಗುವುದಿಲ್ಲ ಎಂದು ತಿಳಿಸಿದರು.   

ಸುಪ್ರೀಂಕೋರ್ಟ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರ 7 ದಿನಗಳ ನಿಗದಿತ ಸಮಯದೊಳಗೆ ತನ್ನ ಉತ್ತರವನ್ನು ಸಲ್ಲಿಸುವಂತೆಕ್ಕೆ ನಿರ್ದೇಶನ ನೀಡಿದೆ. ಪ್ರಕರಣದ ಮುಂದುವರಿದ ವಿಚಾರಣೆಯು ಮೇ.5ರಂದು ನಡೆಯಲಿದೆ. 

- Advertisement -
spot_img

Latest News

error: Content is protected !!