Thursday, June 4, 2026
Homeಕರಾವಳಿಉಡುಪಿದ.ಕ.ದಲ್ಲಿ ಪದ್ಮರಾಜ್, ಉಡುಪಿಯಲ್ಲಿ ಕೋಟ‌, ಶಿವಮೊಗ್ಗದಲ್ಲಿ ಗೀತಾಗೆ ಬೆಂಬಲ; ಸತ್ಯಜಿತ್ ಸುರತ್ಕಲ್

ದ.ಕ.ದಲ್ಲಿ ಪದ್ಮರಾಜ್, ಉಡುಪಿಯಲ್ಲಿ ಕೋಟ‌, ಶಿವಮೊಗ್ಗದಲ್ಲಿ ಗೀತಾಗೆ ಬೆಂಬಲ; ಸತ್ಯಜಿತ್ ಸುರತ್ಕಲ್

- Advertisement -
- Advertisement -

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯು ನಾರಾಯಣ‌ಗುರು ವಿಚಾರ ವೇದಿಕೆಯಿಂದ ಸಮುದಾಯದ ಅಭ್ಯರ್ಥಿಗಳಿಗೆ ಬೆಂಬಲ ನೀಡುವುದಾಗಿ ಸತ್ಯಜಿತ್ ಸುರತ್ಕಲ್ ತಿಳಿಸಿದ್ದಾರೆ.

ಅವರು ಸೋಮವಾರದಂದು ಮಂಗಳೂರಿನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಾರಾಯಣ‌ಗುರು ವಿಚಾರ ವೇದಿಕೆ ನಾರಾಯಣ ‌ಗುರು ಸಮುದಾಯದ ಅಭ್ಯರ್ಥಿಗಳಾದ ದ.ಕ ಕ್ಷೇತ್ರದಲ್ಲಿ ಪದ್ಮರಾಜ್, ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ‌ ಶ್ರೀನಿವಾಸ ಪೂಜಾರಿ ಮತ್ತು ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಅವರನ್ನು ಬೆಂಬಲಿಸಲಿದೆ,’ ಎಂದು ತಿಳಿಸಿದ್ದಾರೆ.

‘ವೇದಿಕೆ ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ಸಮುದಾಯವೂ ಪಕ್ಷದ ಬದಲು‌ ಸಮುದಾಯದ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ಶ್ರಮಿಸುವವರನ್ನು ಗೆಲ್ಲಿಸಬೇಕು,’ ಎಂದು  ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು ಮನವಿ ಮಾಡಿದರು.

- Advertisement -

Latest News

error: Content is protected !!