Thursday, June 4, 2026
Homeಕರಾವಳಿಬೆಂಗಳೂರಿನಲ್ಲಿ ಪೊಲೀಸ್ ಠಾಣೆ ಎದುರು ವಿ. ಸುನೀಲ್ ಕುಮಾರ್ ಪ್ರತಿಭಟನೆ

ಬೆಂಗಳೂರಿನಲ್ಲಿ ಪೊಲೀಸ್ ಠಾಣೆ ಎದುರು ವಿ. ಸುನೀಲ್ ಕುಮಾರ್ ಪ್ರತಿಭಟನೆ

- Advertisement -
- Advertisement -

ಬೆಂಗಳೂರು: ಹುಬ್ಬಳ್ಳಿಯಲ್ಲಿ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಪ್ರತಿಭಟನೆ ನಡೆಸಿದರು.

ನಾನೂ ಕರಸೇವಕ, ನನ್ನನ್ನೂ ಬಂಧಿಸಿ ಎಂದು ಪೋಸ್ಟರ್ ಹಿಡಿದು ಪ್ರತಿಭಟನೆ ಸದಾಶಿವನಗರ ಪೊಲೀಸ್ ಠಾಣೆ ಎದುರು ಕುಳಿತು ಸುನೀಲ್ ಕುಮಾರ್ ಪ್ರತಿಭಟನೆ ನಡೆಸಿದರು‌.

ನಾನು ಕ್ರಿ.ಶ.‌ 1992 ರ ಡಿಸೆಂಬರ್ 6 ರಂದು, ಅಯೋಧ್ಯೆ ಶ್ರೀರಾಮ ಮಂದಿರದ ಕರ ಸೇವಕ ನಾನು, ನನ್ನನ್ನು ಬಂಧಿಸಿ ಎಂದು ಧರಣಿ ಎಂದು ಪೋಸ್ಟರ್ ಹಿಡಿದರು ಸುನೀಲ್ ಕುಮಾರ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆಯಲ್ಲಿಯೇ ಸುನೀಲ್ ಕುಮಾರ್ ಅವರನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಬಿಡುಗಡೆ ಮಾಡಿದರು.

- Advertisement -

Latest News

error: Content is protected !!