Thursday, June 4, 2026
Homeಕರಾವಳಿಬೆಳ್ತಂಗಡಿ; ಉಜಿರೆಯಲ್ಲಿ ತಮ್ಮನ ಎದುರೇ ಆತ್ಮಹತ್ಯೆಗೆ ಶರಣಾದ 8ನೇ ತರಗತಿ ಬಾಲಕ

ಬೆಳ್ತಂಗಡಿ; ಉಜಿರೆಯಲ್ಲಿ ತಮ್ಮನ ಎದುರೇ ಆತ್ಮಹತ್ಯೆಗೆ ಶರಣಾದ 8ನೇ ತರಗತಿ ಬಾಲಕ

- Advertisement -
- Advertisement -

ಬೆಳ್ತಂಗಡಿ; ಉಜಿರೆಯಲ್ಲಿ ತಮ್ಮನ ಎದುರೇ 8ನೇ ತರಗತಿ ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಪೆರ್ಲದಲ್ಲಿ ನಡೆದಿದೆ. ಯೋಗಿಶ್ ಪೂಜಾರಿ ಮತ್ತು ರೇಷ್ಮಾ ದಂಪತಿಗಳ ಪುತ್ರ ಯಕ್ಷಿತ್ (14) ಮೃತ ಬಾಲಕ.

ಆತ್ಮಹತ್ಯೆ ಗೆ ತಮ್ಮನ ಜೊತೆ ನಡೆದ ಗಲಾಟೆ ಕಾರಣ ಎನ್ನಲಾಗಿದೆ. ಯಕ್ಷಿತ್ ಗೆ ಆರು ವರ್ಷದ ತಮ್ಮ ಜೊತೆ ಈ ಹಿಂದೆ ಕೂಡ ಗಲಾಟೆ ನಡೆದಿತ್ತು.ಈ ಗಲಾಟೆಯಲ್ಲಿ ಯಕ್ಷಿತ್ ಹೊಟ್ಟೆಗೆ ಕಚ್ಚಿ ತಮ್ಮ ಗಾಯ ಮಾಡಿದ್ದ.  ವಿಚಾರದಲ್ಲಿ ನೊಂದು ತಮ್ಮನ ಎದುರೇ ಯಕ್ಷಿತ್ ತಾಯಿಯ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ಯಕ್ಷಿತ್ ಉಜಿರೆ ಖಾಸಗಿ ಶಾಲೆಯಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.

ತಂದೆ -ತಾಯಿ ಕೆಲಸಕ್ಕೆ ಹೋದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!