- Advertisement -
![]()
- Advertisement -
ಮಂಗಳೂರು: ಇಲ್ಲಿನ ಚಿನ್ಮಯ ಮಿಷನ್ ವತಿಯಿಂದ 2026ರ ಏಪ್ರಿಲ್ 3ರಿಂದ ಏಪ್ರಿಲ್ 12ರವರೆಗೆ ಚಿನ್ಮಯ ಮಿಷನ್, ಶಾರದ ಸನ್ನಿಧಿ, ರೊಸಾರಿಯೋ ಚರ್ಚ್ ರೋಡ್, ಹೊಯ್ಗೆ ಬಜಾರ್ ನಲ್ಲಿ ಮಹಾಭಾರತದ ಕಥೆಗಳ ವಿಷಯದ ಕುರಿತು ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿದೆ
ಮಹಾಭಾರತದ ಕುರಿತು ವಿಭಿನ್ನ ಕಥೆಗಳು ಮತ್ತು ಪಾತ್ರಗಳ ಮೂಲಕ ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸುವ ಗುರಿಯನ್ನು ಹೊಂದಿರುವ ಈ ಬೇಸಿಗೆ ಶಿಬಿರ, ಇದರ ಜೊತೆಗೆ ಭಗವದ್ಗೀತೆ ಮತ್ತು ವಿಷ್ಣು ಸೂಕ್ತಂ ಪಠಣ ಮತ್ತು ಭಜನೆಗಳನ್ನು ಹಾಗೂ ಮಕ್ಕಳಿಗಾಗಿ ಆಟಗಳು, ಕ್ರಾಫ್ಟ್, ಡ್ರಾಯಿಂಗ್ ಮುಂತಾದ ಹೆಚ್ಚುವರಿ ಚಟುವಟಿಕೆಗಳನ್ನೂ (ವಯೋಮಿತಿ 6 ರಿಂದ 13 ವರ್ಷ) ಆಯೋಜಿಸಲಾಗಿದೆ.
ಈ ಮಕ್ಕಳ ಬೇಸಿಗೆ ಶಿಬಿರವು ಬೆಳಿಗ್ಗೆ 9:30ರಿಂದ ಮಧ್ಯಾಹ್ನ 1:00ರವರೆಗೆ ಇರುತ್ತದೆ. ತರಗತಿಯ ನಂತರ ಪ್ರತಿದಿನ ಅನ್ನಪ್ರಸಾದವಿದೆ.
- Advertisement -


