Thursday, May 16, 2024
Homeತಾಜಾ ಸುದ್ದಿನಾಳೆ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರುವ ಸಾಧ್ಯತೆ; ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ನೀಡಿದ್ರು ಸುಳಿವು

ನಾಳೆ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರುವ ಸಾಧ್ಯತೆ; ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ನೀಡಿದ್ರು ಸುಳಿವು

spot_img
- Advertisement -
- Advertisement -

ಮಂಡ್ಯ ; ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ನಾಳೆ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು  ಜೆಡಿಎಸ್​ ಶಾಸಕ ಸಿ.ಎಸ್.ಪುಟ್ಟರಾಜು ಸುಳಿವು ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಸ್.ಪುಟ್ಟರಾಜು, ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ನಾಳೆ ಬಿಜೆಪಿ ಸೇರ್ತಾರೆ. ಮೋದಿ ಕಾರ್ಯಕ್ರಮದಲ್ಲೇ ಪಕ್ಷ ಸೇರ್ಪಡೆಗೆ ಪ್ಲ್ಯಾನ್ ಮಾಡಿದ್ದರು. ಆದ್ರೆ, ಸರ್ಕಾರಿ ಕಾರ್ಯಕ್ರಮ ಆಗಿದ್ದರಿಂದ ಅವಕಾಶ ಸಿಗಲಿಲ್ಲ ಎಂದು ಹೇಳಿದರು. ಈ ಮೂಲಕ ಸುಮಲತಾ ಬಿಜೆಪಿ ಸೇರುವುದು ಕನ್ಫರ್ಮ್ ಎನ್ನುವ ಸುಳಿವು ಸಿಕ್ಕಂತಾಗಿದೆ.ಎಂದಿದ್ದಾರೆ.

ಇನ್ನು ನಾಳೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರುತ್ತಾರೆ ಎಂದು ಜೆಡಿಎಸ್​ ಶಾಸಕ ಹೇಳಿದ್ದಾರೆ. ಮತ್ತೊಂದೆಡೆ ನಾಳೆಯೇ ಸುಮಲತಾ ಅಂಬರೀಶ್​ ಸುದ್ದಿಗೋಷ್ಠಿ ಕರೆದಿದ್ದು, ಅಧಿಕೃತವಾಗಿ ಬಿಜೆಪಿ ಸೇರ್ಪಡೆ ಬಗ್ಗೆ ಘೋಷಿಸುವ ಸಾಧ್ಯತೆಗಳಿವೆ. ಮಂಡ್ಯದ ತಮ್ಮ ನಿವಾಸದಲ್ಲೇ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಸುಮಲತಾ ಬಿಜೆಪಿ ಸೇರ್ಪಡೆಗೆ ಹೈಕಮಾಂಡ್​ನಿಂದ​ ಗ್ರೀನ್ ಸಿಗ್ನಲ್​ ನೀಡಿದ್ದರಿಂದ ಸುಮಲತಾ ಅಂಬರೀಶ್ ತಮ್ಮ ನಿರ್ಧಾರ ಪ್ರಕಟಿಸಲು​ ಸುದ್ದಿಗೋಷ್ಠಿ ಕರೆದಿದ್ದಾರೆ ಎಂದು ಹೇಳಲಾಗಿದೆ.

- Advertisement -
spot_img

Latest News

error: Content is protected !!