Thursday, June 4, 2026
Homeಕರಾವಳಿಸುಳ್ಯ; ನೇಣು ಬಿಗಿದು ಯುವಕ ಆತ್ಮಹತ್ಯೆ

ಸುಳ್ಯ; ನೇಣು ಬಿಗಿದು ಯುವಕ ಆತ್ಮಹತ್ಯೆ

- Advertisement -
- Advertisement -

ಸುಳ್ಯ; ನೇಣು ಬಿಗಿದು ಯುವಕ ಆತ್ಮಹತ್ಯೆ  ಮಾಡಿಕೊಂಡ ಘಟನೆ ಜೂ.20ರಂದು ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ನಾಗಪಟ್ಟಣದಲ್ಲಿ ನಡೆದಿದೆ.

ನಾಗಪಟ್ಟಣದ ನಿವಾಸಿ ಮಣಿಕಂಠ (29) ಆತ್ಮಹತ್ಯೆಗೆ ಶರಣಾದವರು. ಮಣಿಕಂಠ ಜಾಲ್ಸೂರು ಗೇರು ಬೀಜ ಕಾರ್ಖಾನೆಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಜಾಲ್ಸೂರಿನಿಂದ ನಿನ್ನೆ ತಡ ರಾತ್ರಿ ಮನೆಗೆ ಬಂದ ಯುವಕ ತಾಯಿಯ ಸೀರೆಯನ್ನು ಹಗ್ಗವನ್ನಾಗಿಸಿ ಮನೆ ಸಮೀಪದ ಮಾವಿನ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ಇಂದು ಬೆಳಿಗ್ಗೆ ಆತನ ಬೈಕ್ ಮನೆ ಎದುರು ನಿಂತಿದ್ದು ಆತನಿಗಾಗಿ ಹುಡುಕಾಡಿದಾಗ ಘಟನೆ ಬೆಳಕಿಗೆ ಬಂದಿದೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಆತ್ಮಹತ್ಯೆಗೂ ಮೊದಲು ನಾಲ್ವರು ಸ್ನೇಹಿತರಿಗೆ ಮೇಸೆಜ್ ಮಾಡಿದ್ದ ಎಂದು ಹೇಳಲಾಗಿದೆ. ಸ್ಥಳಕ್ಕೆ ಸುಳ್ಯ ಪೋಲಿಸರು ಧಾವಿಸಿದ್ದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

- Advertisement -

Latest News

error: Content is protected !!