Saturday, October 17, 2026
Homeಕರಾವಳಿಮಂಗಳೂರು: ಗಿಫ್ಟ್ ಪಾರ್ಸೆಲ್ ಬಂದಿರುವುದಾಗಿ ಹೇಳಿ ಹಣ ಪಡೆದು ವಂಚನೆ

ಮಂಗಳೂರು: ಗಿಫ್ಟ್ ಪಾರ್ಸೆಲ್ ಬಂದಿರುವುದಾಗಿ ಹೇಳಿ ಹಣ ಪಡೆದು ವಂಚನೆ

- Advertisement -
- Advertisement -

ಮಂಗಳೂರು: ಗಿಫ್ಟ್ ಪಾರ್ಸೆಲ್ ಬಂದಿರುವುದಾಗಿ ಹೇಳಿ ಹಣ ಪಡೆದು ವಂಚಿಸಿರುವ ಬಗ್ಗೆ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂ.15ರಂದು ಗಿಫ್ಟ್ ಪಾರ್ಸೆಲ್ ಬಂದಿರುವುದಾಗಿ ಇನ್‌ಸ್ಟಾ ಗ್ರಾಂನಲ್ಲಿ ತನಗೆ ಮಾಹಿತಿ ಬಂದಿತ್ತು. ಮರುದಿನ ಬ್ರಾಡ್‌ವೇ ಶಿಪ್ಪಿಂಗ್ ಕಂಪೆನಿ ಹೆಸರಿನಲ್ಲಿ 447760437507ನೇ ನಿಂದ ವಾಟ್ಸಾಪ್ ಸಂದೇಶ ಬಂದಿತ್ತು.

ಆ ಸಂದೇಶದಲ್ಲಿ ಪಾರ್ಸೆಲ್ ಬಂದಿರುವ ಬಗ್ಗೆ ಹೇಳಿ ಮುಂದಿನ ಪಾರ್ಸೆಲ್ ಪ್ರೊಸೆಸ್‌ಗಾಗಿ 45,000 ರೂ. ನೀಡಲು ತಿಳಿಸಲಾಗಿತ್ತು. ಅದರಂತೆ ತಾನು ಹಣ ವರ್ಗಾಯಿಸಿದ್ದೆ. ಬಳಿಕ 447432476463 ನಿಂದ ಸಂದೇಶಗಳನ್ನು ಕಳುಹಿಸಿದ ಇನ್ನೋರ್ವ ಅಪರಿಚಿತ ವ್ಯಕ್ತಿ ‘ಉಡುಗೊರೆ ಜತೆಗೆ ಹಣವನ್ನು ಇಟ್ಟು ನಿಯಮ ಉಲ್ಲಂಘನೆಯಾಗಿದೆ’ ಎಂದು ಬೆದರಿಸಿ 1.61 ಲ.ರೂ.ಗಳನ್ನು ನೀಡಬೇಕೆಂದು ಒತ್ತಾಯಿಸಿದ್ದಾನೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.

- Advertisement -

Latest News

error: Content is protected !!