Monday, June 8, 2026
Homeಕರಾವಳಿಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸುಳ್ಯ ಯುವವಾಹಿನಿ ಘಟಕದಿಂದ 1 ಲಕ್ಷ ರೂಪಾಯಿ ಆರ್ಥಿಕ ನೆರವು

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸುಳ್ಯ ಯುವವಾಹಿನಿ ಘಟಕದಿಂದ 1 ಲಕ್ಷ ರೂಪಾಯಿ ಆರ್ಥಿಕ ನೆರವು

- Advertisement -
- Advertisement -

ಸುಳ್ಯ: ದುಷ್ಕರ್ಮಿಗಳ ದಾಳಿಯಿಂದ ಹತ್ಯೆಯಾದ ಹಿಂದೂ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಕುಟುಂಬಕ್ಕೆ ಸುಳ್ಯ ಯುವವಾಹಿನಿ ಕೇಂದ್ರ ಸಮಿತಿ ₹ 1 ಲಕ್ಷ ಆರ್ಥಿಕ ನೆರವು ನೀಡಿದೆ.

ಪ್ರವೀಣ್‌ ನೆಟ್ಟಾರು ಅವರು ಸುಳ್ಯ ಯುವವಾಹಿನಿ ಘಟಕದ ಮಾಜಿ ಅಧ್ಯಕ್ಷರಾಗಿದ್ದು ಹಾಗೂ ಪ್ರಸ್ತುತ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು.ಅವರ ಸೇವಾ ಮನೋಭಾವ ಸ್ಮರಣೀಯವಾದುದು ಎಂದು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಉದಯ ಅಮೀನ್‌ಮಟ್ಟು ಹೇಳಿದರು.

ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಮತ್ತು ಸದಸ್ಯರು ಪ್ರವೀಣ್‌ ಮನೆಗೆ ತೆರಳಿ ಅವರ ಪತ್ನಿ ನೂತನಾ ಹಾಗೂ ತಂದೆ- ತಾಯಿಗೆ ಸಾಂತ್ವನ ಹೇಳಿದರು

- Advertisement -

Latest News

error: Content is protected !!