- Advertisement -
![]()
- Advertisement -
ಸುಳ್ಯ; ಮರ ಕಡಿಯುತ್ತಿದ್ದಾಗ ಆಕಸ್ಮಿಕವಾಗಿ ಕೊಂಬೆ ತಲೆಗೆ ಬಡಿದು ಯುವಕ ಸಾವನ್ನಪ್ಪಿರುವ ಘಟನೆ ಮಡಿಕೇರಿಯ ಪೆನ್ಶನ್ ಲೈನ್ ರಸ್ತೆಯಲ್ಲಿ ನಡೆದಿದೆ. ಸುಳ್ಯದ ತೊಡಿಕಾನ ಗ್ರಾಮದ ಚಾಂಬಾಡು ನಿವಾಸಿ ಕಿರಣ್ (26) ಮೃತ ಯುವಕ.
ಮಡಿಕೇರಿಯ ಪೆನ್ಶನ್ ಲೈನ್ ರಸ್ತೆಯ ಸೋಮಶೇಖರ್ ಎಂಬವರ ಮನೆ ಬಳಿ ಮರ ಕಡಿಯುತ್ತಿದ್ದಾಗ ಆಕಸ್ಮಿಕವಾಗಿ ಕೊಂಬೆ ತಲೆಗೆ ಬಡಿದು ಸಾವನ್ನಪ್ಪಿದ್ದಾರೆ. ಮೃತ ಕಿರಣ್ ಕಡಬದ ಕೋಡಿಂಬಾಳ ಗ್ರಾಮದ ದಾಸರಗುಡ್ಡೆಯ ದೀಪಿಕಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಈಗಾಗಲೇ ಒಂದು ಹೆಣ್ಣು ಹಾಗೂ ಗಂಡು ಮಗುವಿದೆ. ಇನ್ನು ಎರಡು ತಿಂಗಳ ಹಿಂದೆಯಷ್ಟೇ ಈ ದಂಪತಿಗೆ ತಮ್ಮ ಎರಡನೇ ಗಂಡು ಮಗುವಿನ ನಾಮಕರಣ ಶಾಸ್ತ್ರವನ್ನು ಅತ್ಯಂತ ಸಂಭ್ರಮದಿಂದ ನೆರವೇರಿಸಿದ್ದರು. ಹೀಗಿರುವಾಗಲೇ ಕಿರಣ್ ದೀಪಿಕಾ ಬದುಕಿನಲ್ಲಿ ವಿಧಿ ಆಟವಾಡಿದೆ.
- Advertisement -


