- Advertisement -
![]()
- Advertisement -
ಸುಳ್ಯ: ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಪಂಜಿಗುಂಡಿ ಕಾಲೋನಿಯಲ್ಲಿ ಸೆರೆಯಾಗಿದೆ.
ತೆಂಗಿನ ಮರದ ಬುಡದಲ್ಲಿ 8 ಅಡಿ ಉದ್ದದ ಭಾರೀ ಗಾತ್ರದ ಕಾಳಿಂಗ ಸರ್ಪ ಸೇರಿಕೊಂಡಿತ್ತು. ಈ ಬಗ್ಗೆ ಮಾಹಿತಿ ತಿಳಿದು ಉರಗ ತಜ್ಞ ಶ್ಯಾಮ್ ಭಟ್ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

ಹಾಗೆಯೇ ಹಾವು ಮತ್ತು ಅವುಗಳ ಅಳಿವಿನ ಬಗ್ಗೆ ಜನರಿಗೆ ಇರುವ ಕೆಲ ತಪ್ಪು ತಿಳುವಳಿಕೆಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ ಹಾವು ಕಂಡರೆ ಕೊಲ್ಲಬೇಡಿ, ನಮಗೆ ಮಾಹಿತಿ ನೀಡಿ. ನಾವು ಹಾವನ್ನು ರಕ್ಷಿಸಿ ತೆಗೆದುಕೊಂಡು ಹೋಗಿ ಜೀವ ಉಳಿಸುತ್ತೇವೆ ಎಂದು ಶ್ಯಾಮ್ ಭಟ್ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
- Advertisement -


