Friday, June 5, 2026
Homeಕರಾವಳಿಆಯತಪ್ಪಿ ಬಿದ್ದು ಸುಳ್ಯದ ಕಾವೇರಿ ಡ್ರೈವಿಂಗ್ ಸ್ಕೂಲ್ ಮಾಲೀಕ ಸಂತೋಷ್ ಮಡ್ತಿಲ ಸಾವು

ಆಯತಪ್ಪಿ ಬಿದ್ದು ಸುಳ್ಯದ ಕಾವೇರಿ ಡ್ರೈವಿಂಗ್ ಸ್ಕೂಲ್ ಮಾಲೀಕ ಸಂತೋಷ್ ಮಡ್ತಿಲ ಸಾವು

- Advertisement -
- Advertisement -

ಸುಳ್ಯ: ಆಯತಪ್ಪಿ ಬಿದ್ದ ಪರಿಣಾಮ ಸುಳ್ಯದ ಕಾವೇರಿ ಡ್ರೈವಿಂಗ್ ಸ್ಕೂಲ್ ಮಾಲೀಕ ಸಂತೋಷ್ ಮಡ್ತಿಲ ಅವರು ಸಾವನ್ನಪ್ಪಿದ ಘಟನೆ ಸುಳ್ಯದಲ್ಲಿ ನಡೆದಿದೆ.

ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ದೇವ ಎಂಬಲ್ಲಿಗೆ ಸಂತೋಷ್ ಅವರು ಮನೆ ನೋಡೋದಕ್ಕೆ ತೆರಳಿದ್ದರು. ಈ ವೇಳೆ ಅವರು ಟರೇಸ್ ನಿಂದ ಆಯತಪ್ಪಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆ ತರಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಇದೀಗ ಅವರು ಸಾವನ್ನಪ್ಪಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇವರು ಪತ್ನಿ ಮಧು ಸಂತೋಷ್,ಓರ್ವ ಪುತ್ರಿ ,ಓರ್ವ ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!