Monday, June 8, 2026
Homeಕರಾವಳಿಸುಳ್ಯ: ಸರಕಾರಿ ಆಸ್ಪತ್ರೆ ವೈದ್ಯರು, ನರ್ಸ್ ಗಳ ಸಹಿತ 6 ಮಂದಿಗೆ ಕೊರೊನಾ ಪಾಸಿಟಿವ್

ಸುಳ್ಯ: ಸರಕಾರಿ ಆಸ್ಪತ್ರೆ ವೈದ್ಯರು, ನರ್ಸ್ ಗಳ ಸಹಿತ 6 ಮಂದಿಗೆ ಕೊರೊನಾ ಪಾಸಿಟಿವ್

- Advertisement -
- Advertisement -

ಸುಳ್ಯ ಸರಕಾರಿ ಆಸ್ಪತ್ರೆಯ ವೈದ್ಯರು, ನರ್ಸ್ ಗಳು ಸೇರಿ ಒಟ್ಟು ಆರು ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಕೆಲ ದಿನಗಳ ಹಿಂದೆ ಆಸ್ಪತ್ರೆಯ ಲ್ಲಿ ದಾಖಲಾದ ವ್ಯಕ್ತಿಯೊಬ್ಬರಿಗೆ ಕೊರೊನಾ ಬಂದಿತ್ತು. ಬಳಿಕ ಅವರು ಮಂಗಳೂರಿಗೆ ಹೋಗಿದ್ದರು. ಆ ವ್ಯಕ್ತಿಗೆ ಚಿಕಿತ್ಸೆ ‌ನೀಡಿದ್ದ ನರ್ಸ್ ಗೆ ಕೂಡಾ ಕೊರೊನಾ ದೃಢವಾಗಿತ್ತು. ಇದೀಗ ಸರಕಾರಿ ಆಸ್ಪತ್ರೆಯ ಒಬ್ಬರು ವೈದ್ಯಾಧಿಕಾರಿ, ಮೂವರು ನರ್ಸ್ ಗಳು ಹಾಗೂ ಇಬ್ಬರು ಡಯಾಲಿಸಿಸ್ ವಿಭಾಗದ ತಂತ್ರಜ್ಞರಿಗೆ ಕೊರೋನಾ ಪಾಸಿಟಿವ್ ಬಂದಿದೆ.

ಇಂದು, ನಾಳೆ ಆಸ್ಪತ್ರೆ ಸೀಲ್ ಡೌನ್

ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಇಂದು ಮತ್ತು ನಾಳೆ ಎರಡು ದಿನದ ಮಟ್ಟಿಗೆ ಸೀಲ್ ಡೌನ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಈಗ 17 ಮಂದಿ ಒಳರೋಗಿಗಳಿದ್ದು ಅವರಿಗೆ ಚಿಕಿತ್ಸೆ ನೀಡಲು ಒಬ್ಬರು ವೈದ್ಯಾಧಿಕಾರಿ ಹಾಗೂ ಮೂವರು ನರ್ಸ್ ಗಳನ್ನು ವ್ಯವಸ್ಥೆಗೊಳಿಸಲಾಗಿದೆ.

ಎರಡು ದಿನ ಆಸ್ಪತ್ರೆಗೆ ಬಾರದಿರಲು ವೈದ್ಯರ ಮನವಿ

ಇಂದು ಮತ್ತು ನಾಳೆ ಸ್ಯಾನಿಟೈಸೇಶನ್ ನಡೆಯುವುದರಿಂದ ಸೀಲ್ ಡೌನ್ ಮಾಡಲಾಗುವುದು. ಹೊಸದಾಗಿ ಬರುವ ರೋಗಿಗಳಿಗೆ ಪ್ರವೇಶವಿರುವುದಿಲ್ಲ. ಹೆರಿಗೆಗೆ ಬರುವವರಿಗೆ ಕೂಡ ಅವಕಾಶವಿರುವುದಿಲ್ಲ. ಡಯಾಲಿಸಿಸ್ ಗೆ ಕೂಡ ಅವಕಾಶವಿರುವುದಿಲ್ಲ ಎಂದು ತಿಳಿದು ಬಂದಿದೆ

- Advertisement -

Latest News

error: Content is protected !!