- Advertisement -
- Advertisement -
ಸುಳ್ಯ: ವಳಲಂಬೆಯ ಯುವಕನೋರ್ವ ಕಾಸರಗೋಡಿನ ಬೋವಿಕಾನದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಜೈಸನ್ ಥಾಮಸ್(31) ಮೃತ ದುರ್ದೈವಿ.
ಕಾಸರಗೋಡಿನ ಬೋವಿಕಾನದಲ್ಲಿ ಜೈಸನ್ ಥಾಮಸ್ ಉದ್ಯೋಗದಲ್ಲಿದ್ದರು. ಕಳೆದ ಒಂದು ವಾರದಿಂದ ಅವರು ಯಾರ ಸಂಪರ್ಕಕ್ಕೆ ಸಿಗದೇ ಕಾಣೆಯಾಗಿದ್ದರು ಎನ್ನಲಾಗಿದೆ. ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ರಾತ್ರಿ ಬೋವಿಕಾನದ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ವಳಲಂಬೆಯ ಥೋಮಸ್ ಎಂಬವರ ಪುತ್ರರಾಗಿರುವ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳು, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
- Advertisement -