Friday, May 3, 2024
Homeತಾಜಾ ಸುದ್ದಿಬೆಳ್ತಂಗಡಿ: ಸೆ.15 ರಂದು ವಿಭಿನ್ನವಾಗಿ ಇಂಜಿನಿಯರ್ಸ್‌ ಡೇ ಆಚರಣೆ: ಬೆಳ್ತಂಗಡಿಯಿಂದ ಉಜಿರೆವರೆಗೆ ಬೃಹತ್‌ ವಾಹನ ಜಾಥಾ

ಬೆಳ್ತಂಗಡಿ: ಸೆ.15 ರಂದು ವಿಭಿನ್ನವಾಗಿ ಇಂಜಿನಿಯರ್ಸ್‌ ಡೇ ಆಚರಣೆ: ಬೆಳ್ತಂಗಡಿಯಿಂದ ಉಜಿರೆವರೆಗೆ ಬೃಹತ್‌ ವಾಹನ ಜಾಥಾ

spot_img
- Advertisement -
- Advertisement -

ಬೆಳ್ತಂಗಡಿ: ಎಸಿಸಿಇ(ಐ) ಬೆಳ್ತಂಗಡಿ ಸೆಂಟರ್  ಸಹಯೋಗದೊಂದಿಗೆ ಈ ಬಾರಿ ರೋಟರಿ ಮತ್ತು ಇಂಜಿನಿಯರ್ಸ್ ಡೇ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಚರಿಸಲಾಗ್ತಿದೆ ಎಂದು ಸಂಘದ ಅಧ್ಯಕ್ಷ ಜಗದೀಶ್ ಪ್ರಸಾದ್ ತಿಳಿಸಿದ್ದಾರೆ. .

ಎಸಿಸಿಇ(ಐ) ಬೆಳ್ತಂಗಡಿ ಸೆಂಟರ್ ಒಂದು ಅಖಿಲ ಭಾರತ ಸಿವಿಲ್ ಇಂಜಿನಿಯರುಗಳ ಒಕ್ಕೂಟದ ಒಂದು ಅಂಗ ಸಂಸ್ಥೆಯಾಗಿದ್ದು ಕಳೆದ ಎಪ್ರಿಲ್ ನಲ್ಲಿ ಉದ್ಘಾಟನೆಗೊಂಡಿದೆ.. ಪ್ರಸ್ತುತ ಈ ಸೆಂಟರ್ ನಲ್ಲಿ 133 ಸಕ್ರಿಯ ಸಿವಿಲ್ ಇಂಜಿನಿಯರ್ ಸದಸ್ಯರು ಇದ್ದಾರೆ.

ಇನ್ನು ನಗರದ ವಾರ್ತಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಪ್ರಸಾದ್ ಎಸಿಸಿಇ (ಐ) ಬೆಳ್ತಂಗಡಿ ಸೆಂಟರ್ ವತಿಯಿಂದ ಸೆ.೧೫ ರಂದು, ಸರ್.ಎಮ್.ವಿಶ್ವೇಶ್ವರಯ್ಯ ಅವರ 162 ನೇ ಜಯಂತಿ ಪ್ರಯುಕ್ತ ಮಧ್ಯಾಹ್ನ 3 ಗಂಟೆಗೆ ಬೃಹತ್ ವಾಹನ ಜಾಥಾವನ್ನು ಹಳೇಕೋಟೆ ಬೆಳ್ತಂಗಡಿಯಿಂದ ಉಜಿರೆವರೆಗೆ ಹಮ್ಮಿಕೊಳ್ಳಲಾಗಿದೆ. ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಸಂಜೆ 5 ರಿಂದ ನಮ್ಮ ಸೆಂಟರಿನ ಸದಸ್ಯರಿಗೆ ತಾಂತ್ರಿಕ ಮಾಹಿತಿ ಕಾರ್ಯಾಗಾರವನ್ನೂ ಏರ್ಪಡಿಸಲಾಗಿದೆ. ಈ ಕಾರ್ಯಾಗಾರವನ್ನು ಮಂಗಳೂರಿನ ಖ್ಯಾತ ಇಂಜಿನಿಯರ್‌ ಅನಿರುದ್ಧ ರಾವ್ ಅವರು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದ್ದಾರೆ. .

ಈ ಕಾರ್ಯಕ್ರಮದಲ್ಲಿ ನಮ್ಮ ಅಸೋಸಿಯೇಷನ್ ಸೆಂಟರ್ ವ್ಯಾಪ್ತಿಗೊಳಪಟ್ಟ ಕಡಬ, ನೆಲ್ಯಾಡಿ, ಕೊಕ್ಕಡ, ಉಪ್ಪಿನಂಗಡಿ, ಪುತ್ತೂರು, ವಿಟ್ಲ, ಬಂಟ್ವಾಳ, ಪುಂಜಾಲಕಟ್ಟೆ, ಮಡಂತ್ಯಾರು ಮತ್ತು ಬೆಳ್ತಂಗಡಿ ಇಲ್ಲಿನ ಎಲ್ಲಾ ಸಿವಿಲ್ ಇಂಜಿನಿಯರುಗಳು, ರೋಟರಿ ಮಿತ್ರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮಾ ಭಟ್, ಕಾರ್ಯದರ್ಶಿ ರಕ್ಷಾ ರಾಗ್ರೇಶ್, ಇಂಜಿನಿಯರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು, ಕೋಶಾಧಿಕಾರಿ ಸುರೇಶ್ ಬಂಗೇರ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!