Monday, June 8, 2026
Homeಕರಾವಳಿಸುಳ್ಯ : ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ!

ಸುಳ್ಯ : ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ!

- Advertisement -
- Advertisement -

ಸುಳ್ಯ: ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ 13ರಂದು ತಾಲೂಕಿನ ಸಂಪಾಜೆ ಗ್ರಾಮದಲ್ಲಿ ನಡೆದಿದೆ.

ಬಂಗ್ಲೆಗುಡ್ಡೆಯ ನಿವಾಸಿ ಲಿಖಿತ್(22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಅಡ್ಡಕ್ಕೆ ಹಗ್ಗ ಹಾಕಿ ನೇಣು ಹಾಕಿಕೊಂಡಿದ್ದು, ತಕ್ಷಣವೇ ನೆರೆಹೊರೆಯವರು ಆತನನ್ನು ಕೆಳಗಿಳಿಸಿ ಸಂಪಾಜೆ ಆರೋಗ್ಯ ಕೇಂದ್ರಕ್ಕೆ ಕರೆತಂದು ಅಲ್ಲಿಂದ ಬಳಿಕ ಸುಳ್ಯ ಸರಕಾರಿ ಆಸ್ಪತ್ರೆ ಗೆ ಕೊಂಡೊಯ್ದರು. ಆತನನ್ನು ಪರೀಕ್ಷಿಸಿದ ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದಿಲ್ಲ.

- Advertisement -

Latest News

error: Content is protected !!