- Advertisement -
- Advertisement -
ಸುಬ್ರಮಣ್ಯ: ಕುಮಾರಧಾರ ನದಿಗೆ ಸ್ನಾನಕ್ಕಿಳಿದು ನೀರಿನಲ್ಲಿ ಕೊಚ್ಚಿ ಹೋದ ಯುವಕನಿಗಾಗಿ ಈಜುಗಾರರ ತಂಡ ಹುಡುಕಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
ಕುಕ್ಕೆಗೆ ಪ್ರವಾಸಕ್ಕಾಗಿ 21 ಜನರ ತಂಡದೊಂದಿಗೆ ಬಂದಿದ್ದ ಶಿವು (25) ಎಂಬವರು ಸ್ನೇಹಿತರ ಮಾತು ಲೆಕ್ಕಿಸದೆ ಸ್ನಾನ ಘಟ್ಟದಲ್ಲಿ ನದಿ ನೀರಿಗೆ ಇಳಿದಿದ್ದರು. ನದಿ ತಟದಲ್ಲಿ ಸ್ನೇಹಿತರು ಆತ ಈಜಿ ಬರುವನೆಂದು ಕಾದರೂ ಬಾರದನ್ನು ಗಮನಿಸಿ ಆತಂಕಗೊಂಡಿದ್ದರು.
ಮಾಹಿತಿ ತಿಳಿದು ಸುಬ್ರಹ್ಮಣ್ಯ ಠಾಣಾಧಿಕಾರಿ ಸ್ಥಳಕ್ಕೆ ಆಗಮಿಸಿದ್ದರು. ಬಳಿಕ ಅಗ್ನಿಶಾಮಕ ದಳದ ನೆರವಿನಲ್ಲಿ ಈಜುಗಾರ ತಂಡ ನಿರಂತರ ಹುಡುಕಾಡಿದ್ದು ಯುವಕ ಪತ್ತೆಯಾಗಿಲ್ಲ ಎಂಬ ಮಾಹಿತಿ ಲಭಿಸಿದೆ.ಹೀಗಾಗಿ ಇಂದು ಕಾರ್ಯಾಚಣೆ ಸ್ಥಗಿತಗೊಳಿಸಿದ್ದು ನಾಳೆ ಮತ್ತೆ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ.
- Advertisement -