- Advertisement -
![]()
- Advertisement -
ಬಂಟ್ವಾಳ: ಶಂಭುಗ ಫ್ರೆಂಡ್ಸ್ ಶಂಭುಗ ಇದರ ವತಿಯಿಂದ ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನಲೆಯಿರುವ ಸುಳ್ಳ ಮಲೆ ಗುಹಾ ತೀರ್ಥ ಕ್ಕೆ ಹೋಗುವ ದಾರಿಯ ಸ್ವಚ್ಛತಾ ಕಾರ್ಯ ನಡೆಯಿತು. ಸ್ವಚ್ಛತಾ ಕಾರ್ಯದಲ್ಲಿ ಶಂಭುಗ ಫ್ರೆಂಡ್ಸ್ ಶಂಭುಗ ಇದರ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತಿ ಇದ್ದರು.

ಇನ್ನು ಇದೇ ತಿಂಗಳ 27-08-2022 ಶನಿವಾರದಿಂದ 31-08-2022 ಬುಧವಾರದವರೆಗೆ ಇಲ್ಲಿ ಅರಸು ಶ್ರೀ ಗುಡ್ಡೆ ಚಾಮುಂಡಿ ಮತ್ತು ಪ್ರಧಾನಿ ಶ್ರೀ ಪಂಜುರ್ಲಿ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ.ಬಳಿಕ ಭಕ್ತಾದಿಗಳಿಗೆ ತೀರ್ಥ ಸ್ನಾನಕ್ಕೆ ಮುಕ್ತ ಅವಕಾಶವಿದೆ. ಭಕ್ತಾದಿಗಳು ಸಾಂಪ್ರದಾಯಿಕ ಉಡುಗೆ ಧರಿಸಿ ಬರುವಂತೆ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.
- Advertisement -


