Thursday, May 23, 2024
Homeತಾಜಾ ಸುದ್ದಿನಂದಿಗುಡ್ಡೆ: ರಸ್ತೆ ಬದಿ ಕಸ ಎಸೆದವರ ಫೋಟೋ ನೀಡಿ: ನಗದು ಬಹುಮಾನ ಗೆಲ್ಲಿ

ನಂದಿಗುಡ್ಡೆ: ರಸ್ತೆ ಬದಿ ಕಸ ಎಸೆದವರ ಫೋಟೋ ನೀಡಿ: ನಗದು ಬಹುಮಾನ ಗೆಲ್ಲಿ

spot_img
- Advertisement -
- Advertisement -

ನಂದಿಗುಡ್ಡೆ: ಮನೆ, ಅಂಗಡಿಗಳ ತ್ಯಾಜ್ಯವನ್ನು ನಂದಿಗುಡ್ಡೆಯ ರಸ್ತೆ ಬದಿ ಎಸೆಯುವವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲು ನೆರವಾಗುವ ಉದ್ದೇಶದಿಂದ ಕಸ ಎಸೆದವರ ಫೋಟೋ/ವೀಡಿಯೋ ನೀಡಿದರೆ ಅವರಿಗೆ ಯುನೈಟೆಡ್ ನಂದಿಗುಡ್ಡ ಸ್ಪೋರ್ಟ್ಸ್ ಆ್ಯಂಡ್ ಕಲ್ಬರಲ್ ಸಂಸ್ಥೆಯಿಂದ ಬಹುಮಾನ!

ನಂದಿಗುಡ್ಡೆ ಕ್ರೀಡಾಂಗಣದ ಗೇಟ್‌ನಿಂದ ಸರ್ಕಲ್‌ಗೆ ಬರುವ ಒಳರಸ್ತೆಯಲ್ಲಿ ಹಲವು ಸಮಯದಿಂದ ತ್ಯಾಜ್ಯ ಎಸೆಯುವವರ ಸಂಖ್ಯೆ ಅಧಿಕವಾಗಿದೆ. ಜತೆಗೆ ತ್ಯಾಜ್ಯ ವಿನಿಮಯ ಮಾಡುವ ಪಾಲಿಕೆಯ ವಾಹನ ಕೂಡ ಇಲ್ಲೇ ನಿಲ್ಲುವುದರಿಂದ ಹಲವು ಮಂದಿ ಇಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿದ್ದರು. ಪರಿಣಾಮವಾಗಿ ಈ ರಸ್ತೆ ತ್ಯಾಜ್ಯಮಯವಾಗಿ ಬದಲಾಗಿ ಸ್ಥಳೀಯವಾಗಿ ಸಮಸ್ಯೆ ಉಂಟಾಗಿತ್ತು.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಹಿನ್ನೆಲೆಯಲ್ಲಿ ತ್ಯಾಜ್ಯದ ವಾಹನ ಈ ಭಾಗದಲ್ಲಿ ಡಂಪಿಂಗ್ ಮಾಡದಂತೆ ಯುನೈಟೆಡ್ ನಂದಿಗುಡ್ಡ ಸ್ಪೋರ್ಟ್ಸ್ ಆ್ಯಂಡ್ ಕಲ್ಬರಲ್ ಅಸೋಸಿಯೇಶನ್ ವತಿಯಿಂದ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿತ್ತು. ಅದರಂತೆ ವಾಹನ ನಿಲುಗಡೆ ಆಗುತ್ತಿರಲಿಲ್ಲ. ಆದರೂ  ತ್ಯಾಜ್ಯ ಎಸೆಯುವವರ ಸಂಖ್ಯೆ ಮಾತ್ರ ಕಡಿಮೆಯಾಗಿರಲಿಲ್ಲ. ರಾತ್ರಿ ಸಮಯದಲ್ಲಿ ತ್ಯಾಜ್ಯ ಎಸೆಯುವವರ ಸಮಸ್ಯೆ ಅಧಿಕವಾಯಿತು. ಹೀಗಾಗಿ ಅರಿವು ಮೂಡಿಸುವ ಪ್ರಯತ್ನವನ್ನು ನಡೆಸಲಾಯಿತು. ತ್ಯಾಜ್ಯ ಎಸೆಯುವವರನ್ನು ನಿಲ್ಲಿಸಿ ಅವರಿಗೆ ಮನವರಿಕೆ ಕೂಡ ಮಾಡಲಾಯಿತು.

‘ತ್ಯಾಜ್ಯ ಎಸೆಯುವ ಪರಿಪಾಠ ಅಧಿಕವಾದ ಕಾರಣದಿಂದ ಇದೀಗ ಸಂಸ್ಥೆಯು ಹೊಸ ಯೋಚನೆಗೆ ಮುಂದಾಗಿದೆ. ಇಲ್ಲಿ ತ್ಯಾಜ್ಯ ಎಸೆದವರ ಫೋಟೋ ತೆಗೆದು ನೀಡಿದರೆ ಅವರಿಗೆ ನಗದು ಬಹುಮಾನ ನೀಡಲಾಗುತ್ತದೆ. ಜತೆಗೆ ಆ ವೀಡಿಯೋ/ ಫೋಟೋ ಆಧಾರದಲ್ಲಿ ಅವರ ವಿರುದ್ಧ ಪಾಲಿಕೆ/ಪೊಲೀಸ್ ಇಲಾಖೆಯಿಂದ ಕ್ರಮ ಕೈಗೊಳ್ಳಲು ಅವರಿಗೆ ನೀಡಲಾಗುವುದು. ಈ ನಿಟ್ಟಿನಲ್ಲಿ ರಸ್ತೆಯಲ್ಲಿ ಮಾಹಿತಿ ಫಲಕ ಕೂಡ ಇಡಲಾಗಿದೆ’ ಎನ್ನುತ್ತಾರೆ ಕಾರ್ಯದರ್ಶಿ ಸುಬ್ರಹ್ಮಣ್ಯ.

- Advertisement -
spot_img

Latest News

error: Content is protected !!