Wednesday, June 19, 2024
Homeಕರಾವಳಿಮಂಗಳೂರುಪೊಲೀಸರ ಕಾಲರ್ ಪಟ್ಟಿ ಹಿಡಿಯುತ್ತೇನೆ ಎಂದವರಿಗೆ ಕೈಕಾಲು ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ; ಶಾಸಕ ಹರೀಶ್ ಪೂಂಜ...

ಪೊಲೀಸರ ಕಾಲರ್ ಪಟ್ಟಿ ಹಿಡಿಯುತ್ತೇನೆ ಎಂದವರಿಗೆ ಕೈಕಾಲು ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ; ಶಾಸಕ ಹರೀಶ್ ಪೂಂಜ ವಿರುದ್ಧ ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ವಾಗ್ದಾಳಿ

spot_img
- Advertisement -
- Advertisement -

ಬೆಳ್ತಂಗಡಿ; ಶಾಸಕ ಹರೀಶ್ ಪೂಂಜ ಅವರು ಪೊಲೀಸರು ನೋಟೀಸು ನೀಡಿದಾಗ ಹೈಡ್ರಾಮ ಸೃಷ್ಟಿಸಿ ಕಾರ್ಯಕರ್ತರನ್ನು ಗುರಾಣಿಯಾಗಿ ಉಪಯೋಗಿಸಿ ತಪ್ಪಿಸುವ ಪ್ರಯತ್ನದಂತೆ ನಟಿಸಿದ್ದಾರೆ. ಅವರು ತೋರಿಸುತ್ತಿದ್ದದ್ದು  ಉತ್ತರಕುಮಾರನ ಪೌರುಷ ವೆಂಬುದು ಇದೀಗ ಬಹಿರಂಗಗೊಂಡಿದೆ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದ್ದಾರೆ.

ಬೆಳ್ತಂಗಡಿಯ ಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಅಕ್ರಮ ಗಣಿಗಾರಿಕೆ ನಡೆಸಿದ ರೌಡಿ ಶೀಟರ್ ಯುವ ಮೋರ್ಚಾ ಅಧ್ಯಕ್ಷನನ್ನು ಪೊಲೀಸರು ಬಂಧಿಸಿದರೆ ಶಾಸಕರು ಇಷ್ಟು ಹಾರಾಡುವುದು ಯಾಕೆ ಎಂದು ಪ್ರಶ್ನಿಸಿದ ಅವರು.  ಅಕ್ರಮವಾಗಿ ಸ್ಪೋಟಕಗಳು ಹೇಗೆ ಬಂದವು ಎಂದು ತನಿಖೆಯಾಗುವುದು ಬೇಡ ಎಂಬುದು ಅವರ ಪ್ರತಿಭಟನೆಯ ಉದ್ದೇಶವೇ ಎಂದು ಪ್ರಶ್ನಿಸಿದಾರೆ.

ಸ್ಥಳದಲ್ಲಿ ಪತ್ತೆಯಾದ ಸ್ಫೋಟಕಗಳ ಬಗ್ಗೆ ಅದು ಹೇಗೆ ಪೂರೈಕೆಯಾಗುತ್ತಿದೆ ಎಂಬಗ್ಗೆ ಸಮಗ್ರವಾದ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆಪೊಲೀಸರನ್ನು ನಿಂದನೆ ಮಾಡಿರುವ ಬಗ್ಗೆ ಅವರ ವಿರುದ್ದ ಎರಡು ಪ್ರಕರಣಗಳು ದಾಖಲಾಗಿದೆ. ಪೊಲೀಸರು ನೋಟೀಸ್‌ ನೀಡಲು ಹೋದಾಗ ಶಾಸಕರು ಭಯಗೊಂಡು ಡ್ರಾಮಾ ಮಾಡಿದ್ದಾರೆ. ಪೊಲೀಸರ ಕಾಲರ್ ಪಟ್ಟಿ ಹಿಡಿಯುತ್ತೇನೆ ಎಂದು ಘೋಷಿಸಿದವರು ಕೈಕಾಲು ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ತಾಲೂಕಿನಲ್ಲಿ ಸ್ಪೀಕರ್ ಆಗಿದ್ದ ವೈಕುಂಠ ಬಾಳಿಗರಿಂದ ಆರಂಭಿಸಿ ಐದು ಬಾರಿ ಶಾಸಕರಾದ ವಸಂತ ಬಂಗೇರ ಸೇರಿದಂತೆ ಹಲವರು‌ ಶಾಸಕರುಗಳಾಗಿ ಆಗಿ ಹೋಗಿದ್ದಾರೆ ಆದರೆ ಈವರೆಗೆ ಯಾವ ಶಾಸಕರೂ ಇಂತಹ ಕಾರ್ಯಕ್ಕೆ ಮುಂದಾಗಿರಲಿಲ್ಲ. ತಾಲೂಕಿನ ಮತದಾದರ ಗೌರವಕ್ಕೆ ಚ್ಯುತಿ ತರುವ ಕಾರ್ಯವನ್ನು ಶಾಸಕರು ಮಾಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸತೀಶ್ ಕಾಶೀಪಟ್ಣ, ನಾಗೇಶ್ ಕುಮಾರ್ ಮುಖಂಡರುಗಳಾದ ಧರಣೇಂದ್ರ ಕುಮಾರ್, ನೇಮಿರಾಜ ಕಿಲ್ಲೂರು, ಶಾಫಿ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!