Sunday, June 16, 2024
Homeಕರಾವಳಿಮಂಗಳೂರುಸುಳ್ಯ; ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಐ ಲವ್ ಯೂ ಅಂದ ಯುವಕ; ಆರೋಪಿಗಾಗಿ...

ಸುಳ್ಯ; ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಐ ಲವ್ ಯೂ ಅಂದ ಯುವಕ; ಆರೋಪಿಗಾಗಿ ಪೊಲೀಸರ ಹುಡುಕಾಟ

spot_img
- Advertisement -
- Advertisement -

ಸುಳ್ಯ;  ಕಂಪ್ಯೂಟರ್ ಕ್ಲಾಸ್ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಯುವಕನೊಬ್ಬ ಐ ಲವ್ ಯೂ ಅಂದ ಘಟನೆ ಸುಳ್ಯದಲ್ಲಿ ನಡೆದಿದೆ. ಮೇ. 21ರಂದು ಸಂಜೆ ಘಟನೆ ನಡೆದಿದ್ದು, ಸುಳ್ಯ ಪೊಲೀಸ್‌ ಠಾಣೆಯಲ್ಲಿ ಈ ಕುರಿತಂತೆ ಕೇಸು ದಾಖಲಾಗಿದ್ದು ಪೊಲೀಸರು ಆರೋಪಿಗಾಗಿ ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಬಲೆ ಬೀಸಿದ್ದಾರೆ.

ಕಲ್ಲುಮುಟ್ಟು ಕಡೆಯ ವಿದ್ಯಾರ್ಥಿನಿಯೊಬ್ಬಳು ಕಂಪ್ಯೂಟರ್  ಕ್ಲಾಸ್ ಮುಗಿಸಿ ಮನೆ ನಡ್ಕೊಂಡು ಗಾಂಧಿನಗರದಲ್ಲಿ ಹೋಗುತ್ತಿದ್ದಾಗ ಅಪರಿಚಿತ ಯುವಕನೊಬ್ಬ ಹಿಂಬಾಲಿಸಿಕೊಂಡು ಬಂದು ಮಾತನಾಡಲು ಪ್ರಯತ್ನಿಸಿ, ಲವ್ ಯು ಎಂದಿದ್ದಾನೆ. ಇದರಿಂದ ಕಿರಿಕಿರಿ ಅನುಭವಿಸಿದ ಯುವತಿ ಸಮೀಪದಲ್ಲೇ ಇದ್ದ ತನ್ನ ತಂದೆಗೆ ಫೋನ್ ಮಾಡಿ ಬರಲು ಹೇಳಿದ್ದಾಳೆ. ಆಕೆಯ ತಂದೆ ಬರ್ತಿದ್ದಂತೆ ಯುವಕ ಪರಾರಿಯಾಗಿದ್ದಾನೆ. ಈ ವೇಳೆ ಆತನನ್ನು ಹಿಂಬಾಲಿಸಿದಾಗ ಹೊಟೇಲೊಂದರ ಒಳಹೊಕ್ಕು ಬಾಗಿಲಿನ ತಪ್ಪಿಸಿಕೊಂಡನೆನ್ನಲಾಗಿದೆ.ಸಂಜೆ  ಮನೆಯವರು ಭಜರಂಗದಳದವರ ಮಾರ್ಗದರ್ಶನದಲ್ಲಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಯುವಕನಿಗಾಗಿ ಹುಡುಕಾಟ ಆರಂಭಿಸಿದರು. ಸಿ.ಸಿ. ಕ್ಯಾಮೆರಾಗಳ ಆಧಾರದಲ್ಲಿ ಹುಡುಕಾಟ ನಡೆಸಿದ್ದಾರೆ.

- Advertisement -
spot_img

Latest News

error: Content is protected !!