Saturday, June 6, 2026
Homeತಾಜಾ ಸುದ್ದಿಸೂರಿಕುಮೇರು: ರ‍್ಯಾಂಕ್ ಪಡೆದಿದ್ದ ವಿಶೇಷಚೇತನ ವಿದ್ಯಾರ್ಥಿ ಅನಾರೋಗ್ಯದಿಂದ ಮೃತ್ಯು

ಸೂರಿಕುಮೇರು: ರ‍್ಯಾಂಕ್ ಪಡೆದಿದ್ದ ವಿಶೇಷಚೇತನ ವಿದ್ಯಾರ್ಥಿ ಅನಾರೋಗ್ಯದಿಂದ ಮೃತ್ಯು

- Advertisement -
- Advertisement -

ಬಂಟ್ವಾಳ: ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ಸಾಲಿನಲ್ಲಿ ನಡೆಸಿದ ಅಂತಿಮ ಪದವಿ ಪರೀಕ್ಷೆಯ ಬಿ.ಕಾಂ.ನಲ್ಲಿ ೯೩.೮ ಶೇ.ಅಂಕಗಳಿಸಿ ೯ನೇ ರ‍್ಯಾಂಕ್  ಪಡೆದಿದ್ದ ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ಮಾಂಸಖಂಡಗಳ ಕ್ಷೀಣತೆಯ ಸಮಸ್ಯೆಯಿಂದ ಬಳಲುತ್ತಿದ್ದ ಆದಿತ್ಯ ಭಟ್(೨೧) ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಖಾಯಿಲೆಯ ಪರಿಣಾಮ ದೈಹಿಕ ಅಂಗವಿಕಲತೆಯಿಂದ ಬಳಲಿ ನಡೆಯಲಾಗದ ಸ್ಥಿತಿಯಲ್ಲಿರುವ ಆತನನ್ನು ತಂದೆ ಗಣೇಶ ಭಟ್ ಅವರೇ ಪ್ರತಿದಿನ ಕಾಲೇಜಿಗೆ ಕರೆದುಕೊಂಡು ಬರುತ್ತಿದ್ದರು. ಆತ ವೀಲ್‌ಚೇರ್‌ನಲ್ಲೇ ಕೂತು ತರಗತಿ ಕೇಳುತ್ತಿದ್ದ. ಬಂಟ್ವಾಳದ ಸೂರಿಕುಮೇರು ನಿವಾಸಿಯಾಗಿರುವ ಆದಿತ್ಯ ಬಾಲ್ಯದಿಂದಲೇ ಕಲಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಎಸೆಸೆಲ್ಸಿಯಲ್ಲಿ ೯೬.೪ ಶೇ., ಪಿಯುಸಿಯಲ್ಲಿ ೯೬ ಶೇ. ಅಂಕ ಪಡೆದಿದ್ದರು.

- Advertisement -

Latest News

error: Content is protected !!