Saturday, June 6, 2026
Homeಉತ್ತರ ಕನ್ನಡಶಾಲೆಯ ಬಾವಿಗೆ ಹಾರಿ‌ ಆತ್ಮಹತ್ಯೆ‌ ಮಾಡಿಕೊಂಡ 9 ನೇ ತರಗತಿ ವಿದ್ಯಾರ್ಥಿ‌

ಶಾಲೆಯ ಬಾವಿಗೆ ಹಾರಿ‌ ಆತ್ಮಹತ್ಯೆ‌ ಮಾಡಿಕೊಂಡ 9 ನೇ ತರಗತಿ ವಿದ್ಯಾರ್ಥಿ‌

- Advertisement -
- Advertisement -

ಉತ್ತರಕನ್ನಡ: ಶಾಲಾ ಆವರಣದಲ್ಲಿದ್ದ ಬಾವಿಗೆ ಹಾರಿ ವಿದ್ಯಾರ್ಥಿಯೊಬ್ಬ 9 ನೇ ತರಗತಿ‌ ವಿದ್ಯಾರ್ಥಿ ಮೃತಪಟ್ಟ ಘಟನೆ ಉತ್ತರಕನ್ನಡ  ಶಿರಸಿ ನಗರದ ಪ್ರೊಗ್ರೆಸ್ಸಿವ್ ಪ್ರೌಢಶಾಲೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಶಿವಮೊಗ್ಗ ಜಿಲ್ಲೆ ಸಾಗರ ಮೂಲದ ಆಯನ್ ಬಾಬು ಶೇಖ್ ಮೃತ ದುರ್ದೈವಿ. ಈತ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ.ಮನೆಯಲ್ಲಿ ಪೋಷಕರು ಬೈಯ್ದಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ವಿದ್ಯಾರ್ಥಿಯ ಶವವನ್ನು ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!