- Advertisement -
![]()
- Advertisement -
ಪುತ್ತೂರು; ಪರೀಕ್ಷೆ ಬರೆಯಲು ಮಂಗಳೂರಿಗೆ ತೆರಳಿದ್ದ ವಿದ್ಯಾರ್ಥಿಯೊಬ್ಬ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
ಪುತ್ತೂರಿನ ಕುಂಬ್ರದ ಕೆಐಸಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸುಳ್ಯ ತಾಲೂಕಿನ ಅಜ್ಜಾವರದ ಇರುವಂಬಳ್ಳ ನಿವಾಸಿ ಸಿನಾನ್ (18) ಮೃತ ದುರ್ದೈವಿ. ಸಿನಾನ್ ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಸಿನಾನ್ ವಾಫಿ ಪರೀಕ್ಷೆ ಬರೆಯೋದಕ್ಕಾಗಿ ಮಂಗಳೂರಿಗೆ ತೆರಳಿ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು.
ರಂಝಾನ್ ಉಪವಾಸ ಹಿನ್ನೆಲೆ ಇಂದು ಬೆಳಗ್ಗೆ ಉಪವಾಸ ತ್ಯಜಿಸಿ ಮತ್ತೆ ಮಲಗಿದ್ದರು. ಈ ವೇಳೆ ಮಲಗಿದ್ದಲ್ಲೇ ಸಿನಾನ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
- Advertisement -


