Friday, June 5, 2026
Homeಕರಾವಳಿಉಡುಪಿಉಡುಪಿ: ತಾಯಿ ನೀನೇ ಬಡಿಸಿಕೊಂಡು ಊಟ ಮಾಡು ಎಂದಿದ್ದಕ್ಕೆ 9ನೇ ತರಗತಿ ಬಾಲಕ ಆತ್ಮಹತ್ಯೆ

ಉಡುಪಿ: ತಾಯಿ ನೀನೇ ಬಡಿಸಿಕೊಂಡು ಊಟ ಮಾಡು ಎಂದಿದ್ದಕ್ಕೆ 9ನೇ ತರಗತಿ ಬಾಲಕ ಆತ್ಮಹತ್ಯೆ

- Advertisement -
- Advertisement -

ಉಡುಪಿ : ತಾಯಿ ಊಟ ನೀನೇ ಬಡಿಸಿಕೊಂಡು ಊಟ ಮಾಡು ಎಂದಿದ್ದಕ್ಕೆ 9ನೇ ತರಗತಿ ಬಾಲಕ  ಕೋಪಗೊಂಡು ಆತ್ಮಹತ್ಯೆ ಮಾಡಿಕೊಂಡ  ಘಟನೆ ಕೋಟದ  ಕಾರ್ಕಡ ಎಂಬಲ್ಲಿ ನಡೆದಿದೆ.

ಕಾರ್ಕಡ ನಿವಾಸಿ ಲಕ್ಷ್ಮಿ ಎಂಬವರ ಮಗ, ಕೋಟ ವಿವೇಕ ಹೈಸ್ಕೂಲಿನಲ್ಲಿ 9ನೇ ತರಗತಿಯ ವಿದ್ಯಾರ್ಥಿ ನಾಗೇಂದ್ರ (14) ಆತ್ಮಹತ್ಯೆ ಮಾಡಿಕೊಂಡಾತ.

ನಾಗೇಂದ್ರ ತಾಯಿ ಲಕ್ಷ್ಮೀ ಕಾರ್ಕಡದಲ್ಲಿ ವೀರಭದ್ರ ಕ್ಯಾಂಟೀನ್ ನಡೆಸಿಕೊಂಡಿದ್ದಾರೆ. ಶಾಲೆಗೆ ರಜೆ ಹಿನ್ನೆಲೆಯಲ್ಲಿ ನಾಗೇಂದ್ರ ಕಾರ್ಕಡ ಶಾಲಾ ಮೈದಾನಲ್ಲಿ ಆಡಲು ಹೋಗಿದ್ದ ಎನ್ನಲಾಗಿದೆ. ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದವನು ತಾಯಿಯಲ್ಲಿ ಊಟ ಬಡಿಸಲು ಹೇಳಿದ್ದನು. ಆದರೆ ಲಕ್ಷ್ಮೀಗೆ ಕ್ಯಾಂಟೀನ್‌ನಲ್ಲಿ ಗ್ರಾಹಕರಿದ್ದುದರಿಂದ ನಾಗೇಂದ್ರನಿಗೆ ಮನೆಗೆ ಹೋಗಿ ಊಟ ಹಾಕಿಕೊಂಡು ಊಟ ಮಾಡಲು ಹೇಳಿದ್ದರೆನ್ನಲಾಗಿದೆ. ಹಠ ಸ್ವಭಾವದ ನಾಗೇಂದ್ರ, ಇದರಿಂದ ಸಿಟ್ಟಾಗಿದ್ದಾನೆ. ಮನೆಯಲ್ಲಿ ಬಟ್ಟೆ ಹಾಕಲು ಸಿಟೌಟ್‌ನಲ್ಲಿ ಕಟ್ಟಿದ ಹಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!