Saturday, June 13, 2026
Homeಕರಾವಳಿಕಾಸರಗೋಡುಕಾಸರಗೋಡು : ಯುವಕನ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿ ನೇಣಿಗೆ ಶರಣು

ಕಾಸರಗೋಡು : ಯುವಕನ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿ ನೇಣಿಗೆ ಶರಣು

- Advertisement -
- Advertisement -

ಕಾಸರಗೋಡು : ಯುವಕನ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ಕಾಸರಗೋಡಿನ ಬಂದ್ಯೋಡು ಸಮೀಪದ ಆಡ್ಕ ಎಂಬಲ್ಲಿ ನಡೆದಿದೆ.ಅಡ್ಕದ ಫ್ಲ್ಯಾಟ್ ವೊಂದರಲ್ಲಿ ವಾಸವಾಗಿರುವ ಬದ್ರುದ್ದೀನ್ ರವರ ಪುತ್ರಿ ರೆನಾ ಫಾತಿಮಾ (19) ಮೃತ ವಿದ್ಯಾರ್ಥಿನಿ. ರಾತ್ರಿ ಊಟ ಮಾಡಿ ಅಮ್ಮನ ಜೊತೆ ಮಲಗಿದ್ದ ಈಕೆ ನಿನ್ನೆ ಬೆಳಿಗ್ಗೆ ಏಳು ಗಂಟೆಗೆ ಅಮ್ಮ ಎದ್ದಾಗ ಕಾಣಿಸಿಲ್ಲ. ಹುಡುಕಾಡಿದಾಗ ಇನ್ನೊಂದು ಬೆಡ್ ರೂಂಗೆ ಚಿಲಕ ಹಾಕಿರುವುದು ಕಂಡಿದೆ. ಬಾಗಿಲು ಒಡೆದು ನೋಡಿದಾಗ ರಾಣಾ ಫಾತಿಮಾ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದೆ. ಇನ್ನು ಈಕೆಗೆ ಯುವಕನೊಬ್ಬ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಫಾತಿಮಾ ಫೋನ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!