Thursday, June 4, 2026
Homeಕರಾವಳಿಉಡುಪಿಕಾರ್ಕಳ: ಪರೀಕ್ಷೆಗೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ

ಕಾರ್ಕಳ: ಪರೀಕ್ಷೆಗೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ

- Advertisement -
- Advertisement -

ಕಾರ್ಕಳ: ಪರೀಕ್ಷೆಗೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಿಯಾರು ಗ್ರಾಮದ ಬಲಿಪರಪಾಡಿ ಎಂಬಲ್ಲಿ ನಡೆದಿದೆ.ಬಲಿಪರಪಾಡಿ ನಿವಾಸಿ ಕರುಣಾಕರ ಎಂಬವರ ಮಗ ರಂಜನ್ (17) ಮೃತ ವಿದ್ಯಾರ್ಥಿ.

ನಿಟ್ಟೆ ಕಾಲೇಜಿನಲ್ಲಿ ಇ ಆಯಂಡ್ ಸಿ ಡಿಪ್ಲೋಮಾ ಓದುತ್ತಿದ್ದ  ಈತ, ಆ.4ರಂದು ಬೆಳಗ್ಗೆ ಇದ್ದ ಪರೀಕ್ಷೆಗೆ ಗೈರು ಹಾಜರಾಗಿದ್ದನು.ಈ ಬಗ್ಗೆ ಕಾಲೇಜಿನಿಂದ ಕರೆ ಮಾಡಿದ್ದರು.ಕಾಲೇಜಿಗೆಂದು ಹೋಗಿದ್ದ ರಂಜನ್, ಮನೆಗೆ ಬಂದು ರೂಮಿನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!