Tuesday, April 30, 2024
Homeಕರಾವಳಿಪುತ್ತೂರು: ಪೆರ್ಲಂಪಾಡಿಯಲ್ಲಿ ಚರಣ್‌ರಾಜ್‌ ರೈ ಹತ್ಯೆ  ಪ್ರಕರಣ; ಏಳನೇ ಆರೋಪಿಗೆ ಹೈಕೋರ್ಟ್ ನಿಂದ ನಿರೀಕ್ಷಣಾ ಜಾಮೀನು

ಪುತ್ತೂರು: ಪೆರ್ಲಂಪಾಡಿಯಲ್ಲಿ ಚರಣ್‌ರಾಜ್‌ ರೈ ಹತ್ಯೆ  ಪ್ರಕರಣ; ಏಳನೇ ಆರೋಪಿಗೆ ಹೈಕೋರ್ಟ್ ನಿಂದ ನಿರೀಕ್ಷಣಾ ಜಾಮೀನು

spot_img
- Advertisement -
- Advertisement -

ಪುತ್ತೂರು: ಪೆರ್ಲಂಪಾಡಿಯಲ್ಲಿ  ನಡೆದ ಚರಣ್‌ರಾಜ್‌ ರೈ ಹತ್ಯೆ  ಪ್ರಕರಣದ ಏಳನೇ ಆರೋಪಿಗೆ ಹೈಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ದೊರೆತಿದೆ.

ಚರಣ್‌ರಾಜ್‌ ರೈ ಹತ್ಯೆ ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಆರೋಪಿ ಪ್ರಜ್ವಲ್‌ಗೆ ಹೈಕೋರ್ಟ್  ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪೆರ್ಲಂಪಾಡಿಯಲ್ಲಿ ಮೆಡಿಕಲ್‌ ಶಾಪ್‌ ತೆರೆಯಲು ಪೂರ್ವ ತಯಾರಿಗಾಗಿ ಚರಣ್‌ರಾಜ್‌ ಕೆಲಸದಲ್ಲಿ ತೊಡಗಿದ್ದರು.ಈ ವೇಳೆ ದುಷ್ಕರ್ಮಿಗಳು ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಡಿ 7ನೇ ಆರೋಪಿಯನ್ನಾಗಿ ಪ್ರಜ್ವಲ್‌ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿತ್ತು. ಆ ಬಳಿಕ ಪ್ರಜ್ವಲ್‌ರವರು ನಿರೀಕ್ಷಣಾ ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಪೀಠ ಷರತ್ತು ಬದ್ಧ ಜಾಮೀನು ಮಂಜೂರುಗೊಳಿಸಿದೆ. ಆರೋಪಿ ಪರ ವಕೀಲರಾದ ರಾಜಶೇಖರ ಎಸ್‌ ಮತ್ತು ಮಹೇಶ್‌ ಕಜೆ ಅವರು ವಾದಿಸಿದ್ದರು.

- Advertisement -
spot_img

Latest News

error: Content is protected !!