Friday, June 27, 2025
Homeತಾಜಾ ಸುದ್ದಿವ್ಯಾಲಂಟೈನ್ಸ್ ಡೇಗಾಗಿ 5 ದಿನ ರಜೆ ಕೇಳಿದ ವಿದ್ಯಾರ್ಥಿ:ವಿದ್ಯಾರ್ಥಿಯ ರಜಾ ಅರ್ಜಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್

ವ್ಯಾಲಂಟೈನ್ಸ್ ಡೇಗಾಗಿ 5 ದಿನ ರಜೆ ಕೇಳಿದ ವಿದ್ಯಾರ್ಥಿ:ವಿದ್ಯಾರ್ಥಿಯ ರಜಾ ಅರ್ಜಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್

spot_img
- Advertisement -
- Advertisement -

ಚಾಮರಾಜನಗರ: ವ್ಯಾಲಂಟೈನ್ಸ್ ಡೇಗಾಗಿ ಐದು ದಿನಗಳ ಕಾಲ ರಜೆ ಕೊಡಿ‌ ಸರ್ ಎಂದು ಕೊಳ್ಳೇಗಾಲದ ಬಿಕಾಂ ವಿದ್ಯಾರ್ಥಿಯು ಕಾಲೇಜಿನ ಪ್ರಾಂಶುಪಾಲರಿಗೆ ಬರೆದಿರುವ ರಜಾ ಅರ್ಜಿ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್​​ ಆಗಿದೆ.

ಕೊಳ್ಳೇಗಾಲದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ‌ ಶಿವರಾಜು ಎಸ್. ಎಂಬ ವಿದ್ಯಾರ್ಥಿ ಹೆಸರಲ್ಲಿ ಈ ರಜಾ ಅರ್ಜಿ ಇದೆ. ಪ್ರೇಮಿಗಳ‌ ದಿನ ಹತ್ತಿರ ಬರುತ್ತಿದ್ದು ನನಗೆ ‌ ಹುಡುಗಿಯರ ಕಾಟ ತಡೆಯಲು ಆಗುತ್ತಿಲ್ಲ, ಹಾಗಾಗಿ 5 ದಿನ ರಜೆ ಬೇಕೆಂದು‌ ಫೆಬ್ರವರಿ 9ರಂದು ಈ ಅರ್ಜಿ ಬರೆಯಲಾಗಿದೆ.‌

ಈ ರಜೆ ಅರ್ಜಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅರ್ಜಿಯಲ್ಲಿ ಪ್ರಾಂಶುಪಾಲ ಸೀಗ ನಾಯಕ ಅವರ ಸಹಿ ಮತ್ತು ಮೊಹರೂ ಇದೆ. ಈ ಬಗ್ಗೆ ಪ್ರಾಂಶುಪಾಲರು ಪ್ರತಿಕ್ರಿಯೆ ನೀಡಿದ್ದು, “ತನ್ನ ಸಹಿಯನ್ನು ಯಾರೋ ನಕಲಿ‌ ಮಾಡಿ, ಮೊಹರನ್ನು ಕದ್ದು ಹಾಕಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.

ಪ್ರೇಮಿಗಳ ದಿನಕ್ಕಾಗಿ ರಜೆ ಕೋರಿರುವುದು ಪ್ರಚಾರಕ್ಕಾಗಿ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದಾರೆ. ಅನೇಕರು ಇದು ಸುಳ್ಳು ಕಾರಣ ಎಂದು ಪ್ರತಿಕ್ರಿಯಿಸಿದ್ದಾರೆ. ಪ್ರಾಂಶುಪಾಲರ ಸಹಿಯ್ನೂ ನಕಲು ಮಾಡಿದ್ದು ನೋಡಿದರೆ ಇದು ಪ್ರಚಾರಕ್ಕಾಗಿ ಮಾಡಿದ್ದು ಎಂದು ಹಲವರು ಹೇಳಿದ್ದಾರೆ.

- Advertisement -
spot_img

Latest News

error: Content is protected !!