Thursday, June 25, 2026
Homeಕರಾವಳಿಮನೆ ಸುತ್ತುಮತ್ತ ಅಪರಿಚಿತರು ಓಡಾಡ್ತಿದ್ದಾರೆ, ರಕ್ಷಣೆ ಕೊಡಿ: ಐಜಿಪಿ ಅಮಿತ್ ಸಿಂಗ್ ಗೆ ಪುತ್ತೂರಿನ ಸಂತ್ರಸ್ಥೆ...

ಮನೆ ಸುತ್ತುಮತ್ತ ಅಪರಿಚಿತರು ಓಡಾಡ್ತಿದ್ದಾರೆ, ರಕ್ಷಣೆ ಕೊಡಿ: ಐಜಿಪಿ ಅಮಿತ್ ಸಿಂಗ್ ಗೆ ಪುತ್ತೂರಿನ ಸಂತ್ರಸ್ಥೆ ಮನವಿ

- Advertisement -
- Advertisement -

ಪುತ್ತೂರು: ಸಹಪಾಠಿಯಿಂದಲೇ ವಿದ್ಯಾರ್ಥಿನಿ ತಾಯಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥ ಯುವತಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರನ್ನು ಭೇಟಿ ಮಾಡಿ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇತ್ತೀಚೆಗೆ ನಮ್ಮ ಸುತ್ತಮುತ್ತ ರಾತ್ರಿ ಕೆಲವು ಅಪರಿಚಿತರು ಓಡಾಡುತ್ತಿದ್ದು, ರಾತ್ರಿ ವೇಳೆಯೂ ಗೇಟ್ ಬಡಿಯುವುದು, ಬಾಗಿಲು ಬಡಿಯುವಂತಹ ಘಟನೆಗಳು ನಡೆಯುತ್ತಿವೆ. ಪ್ರಕರಣಕ್ಕೆ ಇರುವ ಸಾಕ್ಷಿ ಎಂದರೆ ಮಗು ಮಾತ್ರ. ಹಾಗಾಗಿ ಮಗುವಿಗೇನಾದ್ರೂ ತೊಂದರೆ ಆದರೆ ಅನ್ನೋ ಆತಂಕವಾಗ್ತಿದೆ. ಹಾಗಾಗಿ ನಮಗೆ ರಕ್ಷಣೆ ಕೊಡ್ಬೇಕು ಎಂದು ಮನವಿ ಮಾಡಿದ್ದಾರೆ.

ಈ ವೇಳೆ ಕರ್ನಾಟಕ ವಿಶ್ವ ಕರ್ಮ ಮಹಾ ಸಭಾ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಉಪಸ್ಥಿತರಿದ್ದರು. ಈ ವೇಳೆ ತನಾಡಿದ ಅವರು, ನಮ್ಮ ಉದ್ದೇಶ ಹುಡುಗನಿಗೆ ಜೈಲು ಶಿಕ್ಷೆ ಆಗುವಂತೆ ಮಾಡುವುದು ಅಲ್ಲ. ಯುವತಿಯನ್ನು ಮದುವೆಯಾಗಿ, ಸಂಸಾರ ನಡೆಸಬೇಕು ಎನ್ನುವುದು ನಮ್ಮ ಆಶಯ. ಈ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್, ನಳಿನ್ ಕುಮಾರ್ ಕಟೀಲು ಜತೆಗೂ ಮಾತನಾಡಿದ್ದೇನೆ ಎಂದರು. ಸದ್ಯದಲ್ಲೇ ಹುಡುಗನ್ನೂ ಜೈಲಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. ನಮ್ಮ ಮನವಿಗೆ ಐಜಿಪಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮಹಿಳಾ ಪೊಲೀಸ್‌ ಒಬ್ಬರನ್ನು ಮನೆಯ ಬಳಿ ನಿಯೋಜಿಸುವಂತೆ ಎಸ್‌ಪಿಗೆ ಸೂಚನೆ ನೀಡಿದ್ದಾರೆ ಎಂದಿದ್ದಾರೆ.

- Advertisement -

Latest News

error: Content is protected !!