Thursday, March 28, 2024
HomeUncategorizedಬೆಳ್ತಂಗಡಿ : ಸರಕಾರದ ಅನುದಾನದಲ್ಲಿ ರಸ್ತೆಗಳಿಗೆ ಶಿಲಾನ್ಯಾಸ

ಬೆಳ್ತಂಗಡಿ : ಸರಕಾರದ ಅನುದಾನದಲ್ಲಿ ರಸ್ತೆಗಳಿಗೆ ಶಿಲಾನ್ಯಾಸ

spot_img
- Advertisement -
- Advertisement -

ಬೆಳ್ತಂಗಡಿ : ಕ್ಷೇತ್ರದಲ್ಲಿ ಈವರೆಗೆ ರೂ. 3000 ಕೋಟಿಗೂ ಮಿಕ್ಕಿ ಅನುದಾನದಲ್ಲಿ ಗ್ರಾಮ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯ ನಡೆದಿದೆ. ಈ ಮೂಲಕ ಗ್ರಾಮೀಣ ಭಾಗದ ರಸ್ತೆಯು ಅಭೂತಪೂರ್ವ ಸುವರ್ಣಯುಗ ಕಂಡಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.

ಅಂಡಿಂಜೆ ಗ್ರಾ.ಪಂ. ವ್ಯಾಪ್ತಿಯ ಅಂಡಿಂಜೆ-ನೆಲ್ಲಿಂಗೇರಿ-ಮೂಡುಕೋಡಿ ಸಂಪರ್ಕ ರಸ್ತೆಗೆ ರೂ. 1 ಕೋಟಿ, ಕೊಕ್ರಾಡಿ ಗ್ರಾಮದ ಬೊಳ್ಳಕುಮೇರು-ಪಿಲ್ಯ ಸಂಪರ್ಕ ರಸ್ತೆಗೆ ರೂ. 1 ಕೋಟಿ ಹಾಗೂ ಕೊಕ್ರಾಡಿ ಗ್ರಾಮದ ಅತ್ರಿಜಾಲು ಮತ್ತು ಏಳಂಬ ರಸ್ತೆಗೆ ತಲಾ ರೂ. 75 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿರುವ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯಹೆದ್ದಾರಿಗೆ ರೂ. 28 ಕೋಟಿ

ಹದಗೆಟ್ಟಿರುವ ಗುರುವಾಯನಕೆರೆ-ಅಳದಂಗಡಿ ರಾಜ್ಯ ಹೆದ್ದಾರಿಯು 28 ಕೋಟಿ ವೆಚ್ಚದಲ್ಲಿ ಅಗಲೀಕರಣದ ಕಾಮಗಾರಿ ಪ್ರಗತಿಯಲ್ಲಿದೆ. ಸುಲ್ಕೇರಿಯಿಂದ ನಾರಾವಿವರೆಗೆ ಮುಂದುವರಿದ ಕಾಮಗಾರಿಗೆ ರೂ. 22 ಕೋಟಿಯ ಕ್ರಿಯಾಯೋಜನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಮುಂದಿನ ಬಾರಿ ಮತ್ತೆ ಅವಕಾಶ ದೊರೆತರೆ ತಾಲೂಕಿನಲ್ಲಿ ಎಲ್ಲಾ ಮಣ್ಣಿನ ರಸ್ತೆಗಳಿಂದ ಮುಕ್ತಿಗೊಳಿಸುತ್ತೇನೆ ಎಂದು ತಿಳಿಸಿದರು.

ಅಂಡಿಂಜೆ ಗ್ರಾ.ಪಂ. ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷೆ ಶ್ವೇತಾ ಪರಮೇಶ್ವರ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಗ್ರಾ.ಪಂ. ಸದಸ್ಯರಾದ ಹರೀಶ್ ಹೆಗ್ಡೆ ಸಾವ್ಯ, ರಂಜಿತ್ ಪಾರಿಜಾತ, ಜಗದೀಶ್ ಹೆಗ್ಡೆ, ಶೋಭಾ ನಾಯ್ಕ, ಬಿಜೆಪಿ ಮಂಡಲ ಹಿಂದುಳಿದ ವರ್ಗಗಳ ಕಾರ್ಯದರ್ಶಿ ದಯಾನಂದ ಕುಲಾಲ್, ವೇಣೂರು ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕ ಸಂತೋಷ್ ಜೈನ್ ಪಕ್ಕಳ, ಆಶಾ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಅಂಡಿಂಜೆ, ಪ್ರಮುಖರಾದ ಪ್ರಣೀತ್, ಯಶೋಧರ ಕಜೆ, ಉಮಾವತಿ ಮರೋಡಿ, ಉಮೇಶ್ ಗೌಡ, ನಾರಾಯಣ ಪೂಜಾರಿ ಸುಲ್ಕೇರಿ, ಅಂಡಿಂಜೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಶಾಲಿನಿ, ಡಾ| ವಿಷ್ಣುಕುಮಾರ್ ಹೆಗ್ಡೆ, ಪಿಡಿಒ ರಾಘವೇಂದ್ರ ಪಾಟೀಲ್, ಎಂಜಿನಿಯರ್ ವರ್ಷ ಪ್ರಭು ಮತ್ತಿತರರು ಇದ್ದರು.

- Advertisement -
spot_img

Latest News

error: Content is protected !!