- Advertisement -
- Advertisement -
ಬೆಂಗಳೂರು : ಮಾಂಸ ಪ್ರಿಯರಿಗೆ ರಾಜ್ಯ ಸರ್ಕಾರವು ಗುಡ್ ನ್ಯೂಸ್ ವೊಂದನ್ನು ನೀಡಿದ್ದು, ಇಂದಿನಿಂದ ರಾಜ್ಯದಲ್ಲಿ ಮಾಂಸ ಮಾರಾಟಕ್ಕೆ ಅನುಮತಿ ನೀಡಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಕೊರೊನಾ ವೈರಸ್ ಹಿನ್ನಲೆಯಲ್ಲಿ ಏಪ್ರಿಲ್ 14 ರವರೆಗೂ ಲಾಕ್ ಡೌನ್ ಘೋಷನೆ ಮಾಡಲಾಗಿದ್ದರೂ. ರಾಜ್ಯದಲ್ಲಿ ಇಂದಿನಿಂದ ಕೋಳಿ, ಕುರಿ, ಮೇಕೆ ಮಾಂಸದ ಮಾರಾಟಕ್ಕೆ ರಾಜ್ಯ ಪಶುಪಾಲನೆ ಹಾಗೂ ಪಶು ವೈದ್ಯಕೀಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಮಾಂಸ ಮಾರಾಟವಾಗುವಂತೆ ಸ್ಥಳೀಯ ಸಂಸ್ಥೆಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
- Advertisement -