ಬಂಟ್ವಾಳ: ಗಾಂಜಾ ಮಾರಾಟ ಮಾಡುತ್ತಿದ್ದ ಅಡ್ಡೆಯೊಂದಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ನೇತ್ರತ್ವದ ತಂಡ ದಾಳಿ ನಡೆಸಿ , ನಾಲ್ವರು ಆರೋಪಿಗಳ ಬಂಧಿಸಿದ್ದಾರೆ. ಪಲ್ಲಮಜಲು ನಿವಾಸಿಗಳಾದ ಅಲ್ತಾಪ್, ಅಬ್ದುಲ್ ರಝಾಕ್, ಸಲ್ಮಾನ್, ಮೂಡುನಡುಗೋಡು ನಿವಾಸಿ ಪ್ರೀತಮ್ ರೋಲ್ಸನ್ ಎಂಬವರು ಬಂಧಿತರು. ಬಂಧಿತ ರ ಕೈಯಿಂದ 150 ಗ್ರಾಂ ಗಾಂಜ ಹಾಗೂ ಮಾರಾಟಕ್ಕೆ ಉಪಯೋಗಿಸುವ ಒಂದು ಆಟೋರಿಕ್ಷಾ , ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಾಲ್ವರು ಆರೋಪಿಗಳು ಪಲ್ಲಮಜಲು ಎಂಬಲ್ಲಿ ಗುಡ್ಡ ದಲ್ಲಿ ಅಡಗಿಕುಳಿತುಕೊಂಡು ಮೊಬೈಲ್ ಬುಕ್ಕಿಂಗ್ ಮೂಲಕ ಮಾರಾಟ ಮಾಡಲಾಗುತ್ತಿದ್ದರು ಎನ್ನಲಾಗಿದೆ. ಪಲ್ಲಮಜಲು ಗುಡ್ಡದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಪೋಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಬಂಟ್ವಾಳ ಡಿ.ವೈ.ಎಸ್.ಪಿ.ವೆಲಂಟೈನ್ ಡು.ಸೋಜ ಅವರ ಮಾರ್ಗದರ್ಶನ ದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕರಾದ ಟಿ ಡಿ ನಾಗರಾಜ್ ರವರ ನೇತ್ರತ್ವದ ಅಪರಾಧ ಪತ್ತೆದಳದ ಪಿ ಎಸ್ ಐ ಕುಮಾರ್ ಕಾಂಬ್ಳೆ ಬಂಟ್ವಾಳ ನಗರ ಪಿಎಸ್ ಐ ಅವಿನಾಶ್ ಹೆಚ್ ಗೌಡ ಹಾಗೂ ಬಂಟ್ವಾಳನಗರ ಠಾಣಾ ಅಪರಾಧ ಪಿಎಸ್ ಐ ಸಂತೋಪ್ ಕುಮಾರ್ ಕಾರ್ಯಚರಣೆ ನಡೆಸಿದ್ದರು.
ಕಾರ್ಯಚರಣೆ ಯಲ್ಲಿ ಹೆಚ್ ಸಿ ಮುರುಗೇಶ್ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಬಸಪ್ಪ, ಕುಮಾರ್, ವಿವೇಕ್, ರಂಗನಾಥ್, ಕೇದಾರ್ ಹಾಗೂ ಶ್ರೀಕಾಂತ್ ಚಾಲಕ ವಿಜಯ್ ರವರು ಭಾಗವಹಿಸಿದ್ದರು.