Tuesday, May 14, 2024
Homeತಾಜಾ ಸುದ್ದಿಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಅತಿವೃಷ್ಟಿ: ಸಂತ್ರಸ್ತರಿಗೆ ನೀಡುವ ಪರಿಹಾರ ಮೊತ್ತ ಪರಿಷ್ಕರಣೆ

ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಅತಿವೃಷ್ಟಿ: ಸಂತ್ರಸ್ತರಿಗೆ ನೀಡುವ ಪರಿಹಾರ ಮೊತ್ತ ಪರಿಷ್ಕರಣೆ

spot_img
- Advertisement -
- Advertisement -

ಬೆಂಗಳೂರು: 2022ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ.‌

ಹಾನಿಯಾದ ಮನೆಗಳ ದುರಸ್ತಿ ಮತ್ತು ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಲು ರಾಜ್ಯ ಸರ್ಕಾರ‌‌ ಮುಂದಾಗಿದ್ದು, ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗಿದೆ.

ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ದರದಲ್ಲಿ ಪರಿಹಾರ ನೀಡಲು ರಾಜ್ಯ‌ ಸರ್ಕಾರ ನಿರ್ಧರಿಸಿದೆ.

ಮಾನವ ಜೀವ ಹಾನಿಗೆ 5 ಲಕ್ಷ ರೂಪಾಯಿ ಪರಿಹಾರ ದೊರೆಯಲಿದ್ದು ಇದರಲ್ಲಿ ಎನ್ ಡಿಆರ್ ಎಫ್ ಮಾರ್ಗಸೂಚಿ ಅನ್ವಯ 4 ಲಕ್ಷ ರೂಪಾಯಿ ಮತ್ತು ರಾಜ್ಯದ ಹೆಚ್ಚುವರಿ ಪರಿಹಾರ 1 ಲಕ್ಷ ರೂಪಾಯಿ ಇರಲಿದೆ.

ಗೃಹೋಪಯೋಗಿ ವಸ್ತುಗಳು, ಬಟ್ಟೆ ಬರೆ ಹಾನಿ 10 ಸಾವಿರ ರೂಪಾಯಿ ದೊರೆಯಲಿದ್ದು, ಎನ್ ಡಿಆರ್ ಎಫ್ ಮಾರ್ಗಸೂಚಿ ಅನ್ವಯ 3,800 ರೂಪಾಯಿ ಮತ್ತು ರಾಜ್ಯದ ಹೆಚ್ಚುವರಿ ಪರಿಹಾರ 6,200 ರೂಪಾಯಿ ಇರಲಿದೆ.

ಶೇಕಡಾ 75ಕ್ಕಿಂತ ಹೆಚ್ಚು ಸಂಪೂರ್ಣ ಮನೆ ಹಾನಿಯಾದಲ್ಲಿ 5 ಲಕ್ಷ ರೂಪಾಯಿ ದೊರೆಯಲಿದ್ದು, ಎನ್ ಡಿಆರ್ ಎಫ್ ಮಾರ್ಗಸೂಚಿ ಅನ್ವಯ 95,100 ರೂಪಾಯಿ ಮತ್ತು ರಾಜ್ಯದ ಹೆಚ್ಚುವರಿ ಪರಿಹಾರ 4,04,900 ರೂಪಾಯಿ ಇರಲಿದೆ.

ಶೇಕಡಾ 25 ರಿಂದ ಶೇಕಡಾ 75 ರಷ್ಟು ತೀವ್ರ ಮನೆ ಹಾನಿಯಾಗಿ ಕೆಡವಿ ಹೊಸ ಮನೆ ನಿರ್ಮಾಣ ಮಾಡುವುದಾದರೆ 5 ಲಕ್ಷ ರೂಪಾಯಿ ಸಿಗಲಿದ್ದು, ಇದರಲ್ಲಿ ಎನ್ ಡಿಆರ್ ಎಫ್ ಮಾರ್ಗಸೂಚಿ ಅನ್ವಯ 95,100 ರೂಪಾಯಿ ಮತ್ತು ರಾಜ್ಯದ ಹೆಚ್ಚುವರಿ ಪರಿಹಾರ 4,04,900 ರೂಪಾಯಿ ಇರಲಿದೆ.

ಶೇಕಡಾ 25 ರಿಂದ ಶೇಕಡಾ 75 ರಷ್ಟು ತೀವ್ರ ಮನೆ ಹಾನಿಯಾಗಿ ದುರಸ್ತಿ ಮಾಡಲು 3 ಲಕ್ಷ ರೂಪಾಯಿ ದೊರೆಯಲಿದೆ. ಎನ್ ಡಿಆರ್ ಎಫ್ ಮಾರ್ಗಸೂಚಿ ಅನ್ವಯ 95,100 ರೂಪಾಯಿ ಮತ್ತು ರಾಜ್ಯದ ಹೆಚ್ಚುವರಿ ಪರಿಹಾರ 2,04,900 ರೂಪಾಯಿ ಲಭ್ಯವಾಗಲಿದೆ.

ಶೇಕಡಾ 15-25 ರಷ್ಟು ಭಾಗಶಃ ಮನೆ ಹಾನಿಯಾಗಿದ್ದರೆ 50 ಸಾವಿರ ರೂಪಾಯಿ ದೊರೆಯಲಿದ್ದು, ಎನ್ ಡಿಆರ್ ಎಫ್ ಮಾರ್ಗಸೂಚಿ ಅನ್ವಯ 5,200 ರೂಪಾಯಿ ಮತ್ತು ರಾಜ್ಯದ ಹೆಚ್ಚುವರಿ ಪರಿಹಾರ 44,800 ರೂಪಾಯಿ ದೊರೆಯಲಿದೆ.

ಡಿಡಿಆರ್ ಎಫ್ ಅಡಿಯಲ್ಲಿ ಷರತ್ತುಗಳ ಅನ್ವಯ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

- Advertisement -
spot_img

Latest News

error: Content is protected !!