- Advertisement -
![]()
- Advertisement -
ಭಕ್ತರಿಗೆ ತಯಾರಿಸಲಾಗುತ್ತಿದ್ದ ಮಹಾಕುಂಭ ಮೇಳದ ಅಡುಗೆಗೆ ಬೂದಿ ಎರಚಾಟ; ಪೊಲೀಸ್ ಅಧಿಕಾರಿಯಿಂದ ಅಮಾನವೀಯ ಕೃತ್ಯ
ಪ್ರಯಾಜ್ ರಾಜ್: ಇಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಕ್ತರಿಗೆಂದೇ ಆಹಾರದ ವ್ಯವಸ್ಥೆಯನ್ನು ಅಲ್ಲಲ್ಲಿ ಮಾಡಲಾಗಿದ್ದು, ಪೊಲೀಸ್ ಅಧಿಕಾರಿ ಭಕ್ತರಿಗೆಂದು ತಯಾರಿಸಲಾದ ಅಡುಗೆಗೆ ಬೂದಿ ಎರಚುವ ಮೂಲಕ ಅಮಾನವೀಯ ಕೃತ್ಯ ಎಸಗಿದ್ದಾನೆ.
ಈ ಕೃತ್ಯವು ವ್ಯಕ್ತಿಯೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದ್ದು ಪೊಲೀಸ್ ಅಧಿಕಾರಿಯ ಅಮಾನವೀಯ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸ್ ಅಧಿಕಾರಿಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇಲ್ಲಿ ಈ ವಿಡಿಯೋ ಅನ್ನು ಈಗಾಗಲೇ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಶೇರ್ ಮಾಡಿಕೊಂಡಿದ್ದು, ಇದೀಗ ಕೃತ್ಯ ಎಸಗಿದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಕುರಿತು ತನಿಖೆ ನಡೆಸಲು ಆದೇಶ ನೀಡಿರುವುದಾಗಿ ಎನ್ನಲಾಗಿದೆ.
- Advertisement -


