Wednesday, June 24, 2026
Homeಕರಾವಳಿಉಡುಪಿಉಡುಪಿ: ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ಆರೋಪಿ ಕರೆತಂದು ಸ್ಥಳ ಮಹಜರು:ಆಕ್ರೋಶಿತ ಸಾರ್ವಜನಿಕರಿಂದ ಪೋಲೀಸ್...

ಉಡುಪಿ: ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ಆರೋಪಿ ಕರೆತಂದು ಸ್ಥಳ ಮಹಜರು:ಆಕ್ರೋಶಿತ ಸಾರ್ವಜನಿಕರಿಂದ ಪೋಲೀಸ್ ಜೀಪ್ ಮೇಲೆ ನುಗ್ಗಲು ಯತ್ನ

- Advertisement -
- Advertisement -

ಉಡುಪಿ: ನೇಜಾರುವಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರುಣ್ ಪ್ರವೀಣ್ ಚೌಗುಲೆಯನ್ನು ಕರೆತಂದು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.ಕೊಲೆ ನಡೆದ ತೃಪ್ತಿ ನಗರದಲ್ಲಿರುವ ಮನೆಗೆ ಆರೋಪಿಯನ್ನು ಕರೆತಂದು ಮಹಜರು ನಡೆಸಲಾಗಿದೆ.

ಈ ವೇಳೆ ಆರೋಪಿಯನ್ನು ತಮ್ಮ ಕೈಗೆ ಒಪ್ಪಿಸುವಂತೆ ಸ್ಥಳದಲ್ಲಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿ ಇದ್ದ ಪೊಲೀಸ್ ಜೀಪ್ ಮೇಲೆ ನುಗ್ಗಲು ಕೂಡಾ ಜನರು ಯತ್ನಿಸಿದರು‌.

ಕೊನೆಗೆ ಲಾಠಿ ಹಿಡಿದು ಪೊಲೀಸರು ಸಾರ್ವಜನಿಕರನ್ನು ಸ್ಥಳದಿಂದ ಚದುರಿಸಿದ್ದು, ಜನರ ಆಕ್ರೋಶದ ನಡುವೆಯೇ ಮಹಜರು ಮುಗಿಸಿದ ಪೊಲೀಸರು ಆರೋಪಿಯನ್ನು ವಾಪಸ್ ಕರೆದೊಯ್ದಿದ್ದಾರೆ.

ನಿನ್ನೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದ ಆರೋಪಿ ಚೌಗುಲೆಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

- Advertisement -

Latest News

error: Content is protected !!