Sunday, June 7, 2026
Homeಕರಾವಳಿಮಂಗಳೂರುಬೆಳ್ತಂಗಡಿ: ವಿಶ್ವ ಪರಿಸರದ ದಿನದ ಪ್ರಯುಕ್ತ ನಡೆದ ರಾಷ್ಟ್ರಮಟ್ಟದ ಸ್ಪರ್ಧೆ ಕಾರ್ಟೂನ್ ಸ್ಪರ್ಧೆಯಲ್ಲಿ ಉಪನ್ಯಾಸಕ ಶೈಲೇಶ್...

ಬೆಳ್ತಂಗಡಿ: ವಿಶ್ವ ಪರಿಸರದ ದಿನದ ಪ್ರಯುಕ್ತ ನಡೆದ ರಾಷ್ಟ್ರಮಟ್ಟದ ಸ್ಪರ್ಧೆ ಕಾರ್ಟೂನ್ ಸ್ಪರ್ಧೆಯಲ್ಲಿ ಉಪನ್ಯಾಸಕ ಶೈಲೇಶ್ ಕುಮಾರ್ ರಿಗೆ ವಿಶೇಷ ಬಹುಮಾನ

- Advertisement -
- Advertisement -

ಬೆಳ್ತಂಗಡಿ: ವಿಶ್ವ ಪರಿಸರದ ದಿನದ ಪ್ರಯುಕ್ತ ನಡೆದ ರಾಷ್ಟ್ರಮಟ್ಟದ ಸ್ಪರ್ಧೆ ಕಾರ್ಟೂನ್ ಸ್ಪರ್ಧೆಯಲ್ಲಿ ಶೈಲೇಶ್ ಕುಮಾರ್ ರಿಗೆ ವಿಶೇಷ ಬಹುಮಾನ ದೊರೆತಿದೆ.

ಛತ್ತಿಸ್ ಗಢ ಪರಿಸರ ಸಂರಕ್ಷಣಾ ಮಂಡಳಿ ಮತ್ತು ಕಾರ್ಟೂನ್ ವಾಚ್ ಮ್ಯಾಗಜೀನ್ ಆಯೋಜಿಸಿದ್ದ ಪ್ಲಾಸ್ಟಿಕ್ ಮಾಲಿನ್ಯ ಮುಕ್ತ ಪರಿಸರ ಎಂಬ ಧ್ಯೇಯದಡಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಉಜಿರೆ ಎಸ್. ಡಿ. ಎಂ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾಗಿರುವ ಶೈಲೇಶ್ ಕುಮಾರ್ ವಿದ್ಯಾರ್ಥಿನಿ ಪ್ಲಾಸ್ಟಿಕ್ ಭೂತವನ್ನು ಓಡಿಸಿ ಭೂಮಿಯನ್ನು ರಕ್ಷಿಸುವ ಕುರಿತಾದ ಕಾರ್ಟೂನ್ ಚಿತ್ರಿಸಿದ್ದರು. ಇದಕ್ಕೆ ರಾಷ್ಟ್ರಮಟ್ಟದ ವಿಶೇಶಷ ಬಹುಮಾನ ದೊರತಿದೆ.

ಶೈಲೇಶ್ ಕುಮಾರ್ ಈಗಾಗಲೇ ಹಲವಾರು ರಾಷ್ಟ್ರಮಟ್ಟದ ಬಹುಮಾನ ಪಡೆದಿದ್ದು ಇದೀಗ ಅವರ ಪ್ರಶಸ್ತಿ ಖಜಾನೆಗೆ ಮತ್ತೊಂದು ಬಹುಮಾನ ಸೇರ್ಪಡೆಯಾಗಿದೆ.

- Advertisement -

Latest News

error: Content is protected !!