Thursday, June 4, 2026
Homeತಾಜಾ ಸುದ್ದಿಹೀಗೊಂದು ಅಪರೂಪದ ಘಟನೆ, ಅಧಿಕಾರ ಸ್ವೀಕರಿಸಿದ ದಿನವೇ ನಿವೃತ್ತಿಯಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಹೀಗೊಂದು ಅಪರೂಪದ ಘಟನೆ, ಅಧಿಕಾರ ಸ್ವೀಕರಿಸಿದ ದಿನವೇ ನಿವೃತ್ತಿಯಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

- Advertisement -
- Advertisement -

ದಾವಣಗೆರೆಇಲ್ಲಿನ ಭ್ರಷ್ಟಾಚಾರ ನಿಗ್ರಹ ದಳದ (ಎ.ಸಿ.ಬಿ) ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಎಸ್‌.ಎಂ. ಸಂದಿಗವಾಡ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ ದಿನವೇ ನಿವೃತ್ತಿಯಾಗುವ ಮೂಲಕ ಗಮನ ಸೆಳೆದಿದ್ದಾರೆ.

ದಾವಣಗೆರೆ ಜಿಲ್ಲೆಯ ಎಸಿಬಿ ಎಸ್ಪಿ ಹುದ್ದೆ ಹಲವು ದಿನಗಳಿಂದ ಖಾಲಿ ಇತ್ತು. ಡಿಎಸ್‌ಪಿ ಎಚ್‌.ಎಸ್‌. ಪರಮೇಶ್ವರ ಅವರೇ ಪ್ರಭಾರ ಎಸ್ಪಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷರೇಟ್‌ನಲ್ಲಿ ಸಂಚಾರ ವಿಭಾಗದ ಎಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದಿಗವಾಡ ಅವರು ಪದೋನ್ನತಿ ಪಡೆದು, ಎಸಿಬಿ ಎಸ್ಪಿ ಹುದ್ದೆಗೆ ವರ್ಗಾವಣೆಗೊಂಡಿದ್ದರು.

ಇಂದು ಬೆಳಿಗ್ಗೆ ಕಚೇರಿಗೆ ಬಂದ ಅವರು ಅಧಿಕಾರ ಸ್ವೀಕರಿಸಿದರು. ಸಂಜೆಯ ವೇಳೆಗೆ ನಿವೃತ್ತಿಯ ಪ್ರಕ್ರಿಯೆಯನ್ನು ಪೂರೈಸುವ ಮೂಲಕ ಒಂದು ದಿನ ಎಸ್ಪಿಯಾಗಿ ಕಾರ್ಯನಿರ್ವಹಣೆ ಮಾಡಿದರು. ಡಿಎಸ್‌ಪಿ ಪರಮೇಶ್ವರ ಅವರೇ ಮತ್ತೆ ಪ್ರಭಾರ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡರು.

- Advertisement -

Latest News

error: Content is protected !!