Sunday, May 19, 2024
Homeತಾಜಾ ಸುದ್ದಿಕೊಳ್ಳೇಗಾಲದಲ್ಲಿ ಜೀವಂತ ವ್ಯಕ್ತಿಗೆ ನಡೆಯಿತು ತಿಥಿ ಕಾರ್ಯ!

ಕೊಳ್ಳೇಗಾಲದಲ್ಲಿ ಜೀವಂತ ವ್ಯಕ್ತಿಗೆ ನಡೆಯಿತು ತಿಥಿ ಕಾರ್ಯ!

spot_img
- Advertisement -
- Advertisement -

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಜೀವಂತ ವ್ಯಕ್ತಿಗೆ ತಿಥಿ ಕಾರ್ಯ ನಡೆಸಿರುವ ಘಟನೆ ನಡೆದಿದೆ.‌

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಬಲಿ ಹಬ್ಬದಲ್ಲಿ ಸತ್ತು ಬದುಕಿದ ವ್ಯಕ್ತಿಗೆ ತಿಥಿ ಕಾರ್ಯ ನಡೆಸಲಾಗಿದೆ. ತಿಥಿ ಮಾಡಲು 101 ಎಡೆಯಿಟ್ಟ ಗ್ರಾಮಸ್ಥರು, ಸತ್ತು ಬದುಕಿದ ವ್ಯಕ್ತಿಯ ಹೆಸರಲ್ಲಿ‌ ತಿಥಿ ಊಟ ಮಾಡಿದ್ದಾರೆ.

ಸತ್ತು ಬದುಕುವ ಮೂಲಕ ವಿಚಿತ್ರ ಆಚರಣೆಗೆ ಸಾಕ್ಷಿಯಾಗಿದ್ದ ಪಾಳ್ಯ ಗ್ರಾಮದಲ್ಲಿ ಇದೀಗ ತಿಥಿ ಆಚರಣೆಯಲ್ಲೂ ವಿಚಿತ್ರ ಆಚರಣೆ ಪಾಲಿಸಲಾಗಿದೆ.

ಪಾಳ್ಯ ಗ್ರಾಮದಲ್ಲಿ ನಡೆದ ಆಚರಣೆಯಲ್ಲಿ 11 ದಿನದ ಹಿಂದೆ ದೇವರಿಗೆ ಬಲಿಯಾಗಿ ಕುರಿ ಸೀಗೆ ನಾಯಕ ಎಂಬ ವ್ಯಕ್ತಿ ಬದುಕಿ ಬಂದಿದ್ದರು.

ಈ ವೇಳೆ ಇತರ ಸಮುದಾಯದ ಜನರು ತಿಥಿ ಕಾರ್ಯ ನೋಡುವಂತಿಲ್ಲ, ಸೀಗೆ ಮಾರಮ್ಮ ಮನೆತನದವರಷ್ಟೇ ತಿಥಿ ನಡೆಸಬೇಕೆಂಬ ನಂಬಿಕೆ‌ ಇದ್ದು, ಸೀಗೆ ಮಾರಮ್ಮ ಒಕ್ಕಲಿನ 120 ಕುಟುಂಬಸ್ಥರಿಗಷ್ಟೇ ಊಟದ ವ್ಯವಸ್ಥೆ ಮಾಡಲಾಗಿತ್ತು.

- Advertisement -
spot_img

Latest News

error: Content is protected !!