- Advertisement -
- Advertisement -
ಮುಂಬೈ: ಬಾಲಿವುಡ್ ನಟ ಸೋನು ಸೂದ್ ಗೆ 2020ರ ಸಾಲಿನ ಏಷ್ಯಾ ಖಂಡದ ನಂಬರ್ ಒನ್ ಸೆಲೆಬ್ರಿಟಿ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ.ಈ ಪಟ್ಟಿಯನ್ನು ಯುಕೆ ಮೂಲದ ಈಸ್ಟರ್ನ್ ಐ ಪತ್ರಿಕೆ ಪ್ರಕಟಿಸಿದ್ದು 50 ಏಷ್ಯನ್ ಸೆಲೆಬ್ರಿಟಿಪಟ್ಟಿಯಲ್ಲಿ ಸೋನು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಸೋನು ಸೂದ್ ತಮಗೆಒಲಿದಿರುವ ಗೌರವದ ಬಗ್ಗೆ ಮಾತನಾಡಿ ಈಸ್ಟರ್ನ್ ಐ ಗೆ ಧನ್ಯವಾದ ಸಲ್ಲಿಸಿದ್ದಾರೆ. “ಸಾಂಕ್ರಾಮಿಕ ರೋಗವು ದೇಶದಲ್ಲಿ ಹೆಚ್ಚಾಗುತ್ತಿದ್ದ ಹಾಗೇ, ನನ್ನ ದೇಶವಾಸಿಗಳಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ ಅಲ್ಲದೆ ಅದು ನನ್ನ ಸಹಜ ಪ್ರವೃತ್ತಿ. ಒಬ್ಬ ಭಾರತೀಯನಾಗಿ ನನ್ನ ಜವಾಬ್ದಾರಿ” ಎಂದು ಅವರು ಹೇಳಿದ್ದಾರೆ.
- Advertisement -