Thursday, June 25, 2026
Homeತಾಜಾ ಸುದ್ದಿದಸರಾ ಬಿಡುವಿನ ಬಳಿಕ ಭಾರತ್ ಜೋಡೋ ಪಾದಯಾತ್ರೆ ಮುಂದುವರಿಕೆ: ಪಾದಯಾತ್ರೆಯಲ್ಲಿ ಭಾಗಿಯಾದ ಸೋನಿಯಾ ಗಾಂಧಿ

ದಸರಾ ಬಿಡುವಿನ ಬಳಿಕ ಭಾರತ್ ಜೋಡೋ ಪಾದಯಾತ್ರೆ ಮುಂದುವರಿಕೆ: ಪಾದಯಾತ್ರೆಯಲ್ಲಿ ಭಾಗಿಯಾದ ಸೋನಿಯಾ ಗಾಂಧಿ

- Advertisement -
- Advertisement -

ಮಂಡ್ಯ: ಎರಡು ದಿನಗಳ ದಸರಾ ಹಬ್ಬದ ಬಿಡುವಿನ ಬಳಿಕ ಇಂದು ಭಾರತ್ ಜೋಡೋ ಪಾದಯಾತ್ರೆ ಮುಂದುವರಿದಿದೆ.ಮಂಡ್ಯ ಜಿಲ್ಲೆಯಲ್ಲಿ ಇಂದು ಪಾದಯಾತ್ರೆ ನಡೆಯುತ್ತಿದ್ದು, ರಾಹುಲ್ ಗಾಂಧಿ ಜೊತೆ ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡಾ ಪಾಲ್ಗೊಂಡಿದ್ದಾರೆ.

ನಾಗಮಂಗಲ ತಾಲೂಕಿನ ಜಕ್ಕನಹಳ್ಳಿಯಿಂದ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಎರಡು ದಿನಗಳ ಕಾಲ ಹೆಚ್.ಡಿ. ಕೋಟೆ ತಾಲೂಕಿನ ಕಬಿನಿ ಸಮೀಪ ಖಾಸಗಿ ರೆಸಾರ್ಟ್ ನಲ್ಲಿ ಎರಡು ದಿನಗಳ ಕಾಲ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಂಗಿದ್ದರು.

ಕಬಿನಿಯಿಂದ ನಾಗಮಂಗಲ ತಾಲೂಕಿನ ಹೊನ್ನೆಮಡು ಹೆಲಿಪ್ಯಾಡ್ ಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ‌.

- Advertisement -

Latest News

error: Content is protected !!