Tuesday, June 9, 2026
Homeಅಪರಾಧಕ್ರೂಸ್ ಶಿಪ್ ನಲ್ಲಿ ರೇವ್ ಪಾರ್ಟಿ: ಎನ್​ ಸಿ ಬಿ ಬಲೆಗೆ ಬಿದ್ದ ಶಾರುಖ್ ಖಾನ್...

ಕ್ರೂಸ್ ಶಿಪ್ ನಲ್ಲಿ ರೇವ್ ಪಾರ್ಟಿ: ಎನ್​ ಸಿ ಬಿ ಬಲೆಗೆ ಬಿದ್ದ ಶಾರುಖ್ ಖಾನ್ ಪುತ್ರ!

- Advertisement -
- Advertisement -

ಮುಂಬೈ: ವಾಣಿಜ್ಯ ನಗರಿ ಮುಂಬೈನ ಹಡಗೊಂದರ ಒಳಗೆ ನಡೆಯುತ್ತಿದ್ದ ರೇವ್​ ಪಾರ್ಟಿಯ ಮೇಲೆ ನಾರ್ಕೋಟಿಕ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ತಂಡ ದಾಳಿ ನಡೆಸಿ ಕೊಕೇನ್​, ಹಶೀಶ್​ ಮತ್ತು ಎಂಡಿಎಂಎ ಸೇರಿದಂತೆ ಅನೇಕ ಅಕ್ರಮ ಡ್ರಗ್ಸ್​ಗಳನ್ನು ಶನಿವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪುತ್ರ ಕೂಡಾ ಈ ರೇವ್ ಪಾರ್ಟಿಯಲ್ಲಿದ್ದ ಎನ್ನಲಾಗಿದ್ದು, ಆರ್ಯನ್ ಖಾನ್ ಸೇರಿ 10 ಮಂದಿಯನ್ನು ಎನ್ ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಂಧಿತರೆಲ್ಲರೂ ಹೈ ಪ್ರೊಫೈಲ್ ವ್ಯಕ್ತಿಗಳು ಎಂದು ಹೇಳಲಾಗಿದೆ.

ಕೇವಲ ಎರಡು ವಾರಗಳ ಹಿಂದಷ್ಟೇ ಉದ್ಘಾಟನೆಯಾದ ಎಂಪ್ರೆಸ್​ ಹಡಗಿನಲ್ಲಿ ಶನಿವಾರ ಸಂಜೆ ಪ್ರಮುಖ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಎನ್​ಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ನಡೆಯುತ್ತಿರುವುದರ ಬಗ್ಗೆ ಸುಳಿವು ದೊರೆತ ಹಿನ್ನೆಲೆಯಲ್ಲಿ ವಲಯ ನಿರ್ದೇಶಕ ಸಮೀರ್​​ ವಾಂಖೇಡೆ ನೇತೃತ್ವದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಶನಿವಾರ ರಾತ್ರಿ ಹಡಗಿನ ಮೇಲೆ ದಾಳಿ ನಡೆಸಲಾಗಿದೆ.

ಪಾರ್ಟಿಯ ಸ್ಥಳದಿಂದ ಮಾದಕ ವಸ್ತುಗಳಾದ ಕೊಕೇನ್‌, ಹಶೀಶ್‌, ಎಂಡಿಎಂಎ ಅನ್ನು ವಶಪಡಿಸಿಕೊಳ್ಳಲಾಗಿದೆ. ಅವರನ್ನೆಲ್ಲ ಶೀಘ್ರದಲ್ಲಿಯೇ ಮುಂಬೈಗೆ ಕರೆ ತರಲಾಗುತ್ತದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನಲ್ಲಿ ಕಳೆದ ವರ್ಷ ಬೆಳಕಿಗೆ ಬಂದಿದ್ದ ಬಾಲಿವುಡ್‌ ನಟ ಸುಶಾಂತ್‌ ರಜಪೂತ್‌ ಸಾವಿನಲ್ಲೂ ಡ್ರಗ್ಸ್‌ ಜಾಲ ಪ್ರಮುಖ ಪಾತ್ರ ವಹಿಸಿದ್ದ ಬಗ್ಗೆ ಶಂಕೆಗಳು ಎದ್ದಿದ್ದವು. ಆ ಸಂದರ್ಭ ದಲ್ಲಿಯೂ ಕೂಡ ಎನ್‌ಸಿಬಿ ಅಧಿಕಾರಿ ಗಳು ದಾಳಿ ನಡೆಸಿ ಹಲವರನ್ನು ಬಂಧಿಸಿದ್ದರು. ಹೀಗಾಗಿ, ಮತ್ತೂಮ್ಮೆ ಬಾಲಿವುಡ್‌ ನಲ್ಲಿ ಡ್ರಗ್ಸ್‌ ಜಾಲ ಬಲವಾಗಿರುವ ಬಗ್ಗೆ ಶಂಕೆಗಳು ವ್ಯಕ್ತವಾಗಿದೆ.

- Advertisement -

Latest News

error: Content is protected !!