Thursday, June 4, 2026
Homeಚಿಕ್ಕಮಗಳೂರುಚಿಕ್ಕಮಗಳೂರಿನಲ್ಲೊಂದು ಬೆಚ್ಚಿ ಬೀಳಿಸುವ ಘಟನೆ; ತಾಯಿಯನ್ನು ಸುಟ್ಟು ಹಾಕಿ ಅಲ್ಲೇ ಗಡದ್ ನಿದ್ದೆಗೆ ಜಾರಿ ಪರಮ...

ಚಿಕ್ಕಮಗಳೂರಿನಲ್ಲೊಂದು ಬೆಚ್ಚಿ ಬೀಳಿಸುವ ಘಟನೆ; ತಾಯಿಯನ್ನು ಸುಟ್ಟು ಹಾಕಿ ಅಲ್ಲೇ ಗಡದ್ ನಿದ್ದೆಗೆ ಜಾರಿ ಪರಮ ಪಾಪಿ ಮಗ

- Advertisement -
- Advertisement -

ಚಿಕ್ಕಮಗಳೂರಿನಲ್ಲೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಪರಮ ಪಾಪಿ ಮಗನೊಬ್ಬ ತಾಯಿಯನ್ನು ಸುಟ್ಟು ಹಾಕಿ ಅಲ್ಲೇ ಗಡದ್ ನಿದ್ದೆಗೆ ಜಾರಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಅರೆನೂರು ಸಮೀಪದ ಹಕ್ಕಿಮಕ್ಕಿ ಗ್ರಾಮದಲ್ಲಿ ಇಂತಹ ಹೇಯ ಕೃತ್ಯ ನಡೆದಿದೆ. ಭವಾನಿ(52) ಕೊಲೆಯಾದ ಮಹಿಳೆ. ಪವನ್ (28) ಕೊಲೆ ಮಾಡಿದ ಪಾಪಿ ಮಗ.

ಪವನ್ ಕೂಲಿ ಕೆಲಸ ಮಾಡಿಕೊಂಡು ಅಮ್ಮನ ಜೊತೆಯಲ್ಲಿದ್ದ. ಪವನ್ ಕಳೆದ ರಾತ್ರಿ ತಾಯಿಯನ್ನ ಕೊಂದು ಮನೆಯೊಳಗೆ ಬೆಂಕಿ ಹಾಕಿ ಸುಟ್ಟು ಹಾಕಿದ್ದಾನೆ. ಬಳಿಕ ತಾಯಿ ಕಾಪಾಡಿ ಎಂದು ಅಂಗಲಾಚುತ್ತಿದ್ದರೆ ಪವನ್  ಅಲ್ಲೇ ಪಾಪಪ್ರಜ್ಞೆಯೇ ಇಲ್ಲದೇ ಮಲಗಿದ್ದಾನೆ.

ನೆರೆಹೊರೆಯವರಿಗೆ  ವಿಷಯ ತಿಳಿದು ಆಲ್ದೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪವನ್ ನನ್ನ ಆಲ್ದೂರು ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!