Wednesday, June 24, 2026
Homeಕರಾವಳಿಕಾರ್ಕಳ ಬಂಗ್ಲೆಗುಡ್ಡೆಯಲ್ಲಿ ಮಾವನನ್ನೇ ಕೊಂದ ಪಾಪಿ ಅಳಿಯ

ಕಾರ್ಕಳ ಬಂಗ್ಲೆಗುಡ್ಡೆಯಲ್ಲಿ ಮಾವನನ್ನೇ ಕೊಂದ ಪಾಪಿ ಅಳಿಯ

- Advertisement -
- Advertisement -

 ಕಾರ್ಕಳ:  ಅಳಿಯನೇ ತನ್ನ ಮಾವನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಮಾವ ಸಾವನ್ನಪ್ಪಿರುವ ಘಟನೆ ಕಾರ್ಕಳ ಬಂಗ್ಲೆಗುಡ್ಡೆಯಲ್ಲಿ ನಡೆದಿದೆ.  ಬಂಗ್ಲೆಗುಡ್ಡೆ ಹಂಚಿಕಟ್ಟೆ ನಿವಾಸಿ ಶೇಖ್‌ ಅಬೂಬಕ್ಕರ್‌ (57) ಮೃತ ದುರ್ದೈವಿ.

ಶೇಖ್‌ ಅಬೂಬಕ್ಕರ್‌ ಬಂಗ್ಲೆಗುಡ್ಡೆ ಹಂಚಿಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರ ಮಗಳ ಗಂಡ ತೌಸಿಫ್‌ ಡಿ. 31ರಂದು ಮಾವನೊಂದಿಗೆ ಜಗಳಕ್ಕಿಳಿದು ಎಡಕೆನ್ನೆಗೆ ಹೊಡೆದು, ಮರ್ಮಾಂಗಕ್ಕೆ ಬಲವಾಗಿ ತುಳಿದಿದ್ದಾನೆ.  ಬಳಿಕ ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ, ಹೆಚ್ಚಿನ ಚಿಕಿತ್ಸೆಗಾಗಿ ಜ. 1ರಂದು ಮಣಿಪಾಲ ಆಸ್ಪತ್ರೆಗೆ ರವಾನಿಸುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Latest News

error: Content is protected !!